

ಇಂದೋರ್: ಕಟ್ಟಡಕ್ಕೆ ಪೇಂಟ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ವರದಿಯಾಗಿದೆ. ಸಾವಿನ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಡಿಸೆಂಬರ್ 26ರಂದು ಈ ಘಟನೆ ನಡೆದಿದೆ. ಎಲ್ಲಿ ಸಂಭವಿಸಿದೆ ಎಂಬುದರ ಮಾಹಿತಿ ಇನ್ನೂ ತಿಳಿದುಬಂದಿಲ್ಲ.
ಮೃತ ವ್ಯಕ್ತಿ ಆಶಿಶ್ ಎಂದು ಗುರುತಿಸಲಾಗಿದ್ದು, ವೃತ್ತಿಯಲ್ಲಿ ಪೇಂಟರ್ ಆಗಿದ್ದರು ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಆಶಿಶ್ ಇಂದೋರ್‌ನ ಸೈಟ್‌ನಲ್ಲಿ ಕೆಲಸ ಮಾಡುವಾಗ ಅಸ್ವಸ್ಥತೆಯನ್ನು ಅನುಭವಿಸಿದ್ದಾರೆ. ತುಂಬ ಆಯಾಸ ಆದ್ದರಿಂದ ಮುಖ ತೊಳೆದು, ವಿರಾಮ ತೆಗೆದುಕೊಂಡ ಅವರು, ಬಣ್ಣದ ಬಕೆಟ್ ಮೇಲೆ ಕುಳಿತುಕೊಂಡಿದ್ದಾರೆ. ಆದ್ರೆ, ದುರದೃಷ್ಟವಶಾತ್ ಈ ವೇಳೆ ಹಠಾತ್ ಹೃದಯಘಾತ ಸಂಭವಿಸಿದ್ದು, ಕುಳಿತ ಜಾಗದಲ್ಲೇ ಆಶಿಶ್ ಮೃತಪಟ್ಟಿದ್ದಾರೆ.
ಆಶಿಶ್ ಜತೆಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ಘಟನೆ ಸಂಭವಿಸುತ್ತಿದ್ದಂತೆ ತಕ್ಷಣ ರಕ್ಷಣೆಗೆ ಬಂದಿದ್ದಾರೆ. ಆದ್ರೆ, ಅಷ್ಟರೊಳಗೆ
ಅವರು ಸಾವನ್ನಪಿದ್ದರು ಎಂಬುದು ತಿಳಿದುಬಂದಿದೆ. ಘಟನೆ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).