

ಹೈದ್ರಾಬಾದ್: ( Video ) ದೇವರ ಸನ್ನಿಧಿಯಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ ವೇಳೆ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಈ ಘಟನೆ ಹೈದರಾಬಾದ್‌ನ ಕೂಕಟ್ ಪಲ್ಲಿಯ ಹೋಸಿಂಗ್ ಬೋರ್ಡ್‌ನಲ್ಲಿ ನಡೆದಿದೆ.
31 ವರ್ಷದ ವಿಷ್ಣುವರ್ಧನ್ ಎಂದು ಗುರುತಿಸಲಾದ ವ್ಯಕ್ತಿ, ಹೈದರಾಬಾದ್‌ನ ಕೆಪಿಎಚ್‌ಬಿಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದಿನನಿತ್ಯದ ಪ್ರಾರ್ಥನೆಯ ವೇಳೆ ಅನಿರೀಕ್ಷಿತವಾಗಿ ಕುಸಿದು ಬಿದ್ದಿದ್ದಾನೆ.
ಸತ್ಯಸಾಯಿ ಜಿಲ್ಲೆಯ ಕದಿರಿ ಮೂಲದ ವಿಷ್ಣುವರ್ಧನ್ (31) ಹೈದರಾಬಾದ್‌ನ ಕುಕಟ್ ಪಲ್ಲಿ ಹೋಸಿಂಗ್ ಬೋರ್ಡ್‌ನಲ್ಲಿ ವಾಸಿಸುತ್ತಿದ್ದು, ಖಾಸಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ದೇವರಲ್ಲಿ ಅಪಾರ ಭಕ್ತಿ. ಪ್ರತಿದಿನ ಸ್ಥಳೀಯ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರದಕ್ಷಿಣೆ ಮಾಡುವುದು ವಾಡಿಕೆ.
ಇಂದು ಕೂಡ ದೇವಸ್ಥಾನದ ಪ್ರದಕ್ಷಿಣೆ ಹಾಕುತ್ತಿದ್ದಾಗ ಹೃದಯಾಘಾತವಾಗಿ ದೇವಸ್ಥಾನದ ಕಂಬವೊಂದಕ್ಕೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಭಕ್ತರು ಸಿಪಿಆರ್ ಮಾಡಿಸಿದರಾದರೂ ಫಲಕಾರಿಯಾಗಲಿಲ್ಲ. ಈ ದಾರುಣ ಘಟನೆಯಿಂದ ದೇಗುಲದಲ್ಲಿ ದುಃಖ ಮಡುಗಟ್ಟಿದೆ.
ಘಟನೆ ಕುರಿತು ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದೇವಾಲಯದ ಆವರಣದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪೊಲೀಸರಿಗೆ ಭಕ್ತರು ಮಾಹಿತಿಯನ್ನು ಒದಗಿಸುತ್ತಿದ್ದಾರೆ. ಹಠಾತ್ ಕುಸಿದು ಬಿದ್ದಿರುವುದು ಹೃದಯಾಘಾತಕ್ಕೆ ಕಾರಣ. ಇದು ಸಹಜ ಸಾವು ಎಂದು ಹೈದರಾಬಾದ್ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ಹೃದಯಾಘಾತದ ಸಾವುಗಳು ಇತ್ತೀಚೆಗೆ ಹೆಚ್ಚು ದಾಖಲಾಗಿವೆ. ಒಂದು ಕಾಲದಲ್ಲಿ 60 ವರ್ಷ ಮೇಲ್ಪಟ್ಟವರಲ್ಲಿ ಹೃದಯಾಘಾತ ಹೆಚ್ಚಾಗಿ ಕಂಡು ಬರುತ್ತಿತ್ತು ಆದರೆ ಕರೋನಾ ನಂತರ ವಯಸ್ಸಿನ ಭೇದವಿಲ್ಲದೆ ಹೃದಯಾಘಾತವಾಗುತ್ತದೆ.
ಹೃದಯಾಘಾತವು ಚಿಕ್ಕ ಮಗುವಿನಿಂದ 90 ವರ್ಷದವರೆಗೆ ಯಾರಿಗಾದರೂ ಸಂಭವಿಸಬಹುದು. ಅಲ್ಲಿಯವರೆಗೂ ನಮ್ಮ ನಡುವೆ ಖುಷಿಯಾಗಿದ್ದವರು ನಮ್ಮ ಕಣ್ಣೆದುರೇ ದಿಢೀರ್ ಕುಸಿದು ಸಾಯುತ್ತಿದ್ದಾರೆ.
ಹೃದಯಾಘಾತ ತಡೆಯಲು
ನಿಮಗೆ ಹೃದಯಾಘಾತವಾದರೆ ತಕ್ಷಣ ವೈದ್ಯಕೀಯ ಸಹಾಯ ಪಡೆಯುವುದು ಬಹಳ ಮುಖ್ಯ ಎಂದು ವೈದ್ಯರು ಹೇಳುತ್ತಾರೆ
ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಮಧುಮೇಹದಂತಹ ಕಾಯಿಲೆಗಳನ್ನು ನಿಯಂತ್ರಿಸುವುದು
ಧೂಮಪಾನ ಮಾಡದಿರುವುದು
ವ್ಯಾಯಾಮ
ಆರೋಗ್ಯಕರ ಆಹಾರ ಸೇವನೆ