ಜಿಮ್​ನಲ್ಲಿ​ ವರ್ಕೌಟ್​ ಮಾಡುತ್ತಿದ್ದ ವ್ಯಕ್ತಿ ದಿಢೀರ್​ ಸಾವು!

WhatsApp Image 2024-05-02 at 5.54.03 PM
Published on

ಉತ್ತರಪ್ರದೇಶ: 32 ವರ್ಷದ ವ್ಯಕ್ತಿಯೊಬ್ಬ ಎಂದಿನಂತೆ ಜಿಮ್​ನಲ್ಲಿ ವರ್ಕೌಟ್​ ಮಾಡುವಾಗ ದಿಢೀರ್​ ಕುಸಿದಿದ್ದು, ಬ್ರೈನ್​ ಸ್ಟ್ರೋಕ್​ನಿಂದ ಮೃತಪಟ್ಟ ಶಾಕಿಂಗ್ ಘಟನೆ ಉತ್ತರಪ್ರದೇಶದ ವಾರಣಾಸಿಯಲ್ಲಿ ವರದಿಯಾಗಿದೆ. ಈ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಜಿಮ್ ಮಾಡುವಾಗ ಬ್ರೈನ್​ ಸ್ಟ್ರೋಕ್ ಆದ ಕಾರಣ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವರದಿ ಉಲ್ಲೇಖಿಸಿದ್ದು, ಮೃತ ವ್ಯಕ್ತಿಯನ್ನು ದೀಪಕ್ ಗುಪ್ತಾ ಎಂದು ಗುರುತಿಸಲಾಗಿದೆ. ಪ್ರತಿದಿನ ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದ ದೀಪಕ್​, ಅದೇ ರೀತಿ ನಿನ್ನೆ (ಮೇ.02) ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದಾಗ ದಿಢೀರ್​​​ ವಿಪರೀತ ತಲೆನೋವು ಆವರಿಸಿಕೊಂಡಿದೆ. ತಕ್ಷಣ ಸ್ಥಳದಲ್ಲೇ ಕುಸಿದ ದೀಪಕ್​ರನ್ನು ಹೆಚ್ಚಿನ ಚಿಕಿತ್ಸೆಗೆಂದು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಖಾಸಗಿ ಆಸ್ಪತ್ರೆಗೆ ದಾಖಲಿಸಲಾದ ದೀಪಕ್​ರನ್ನು ಪರೀಕ್ಷೆಗೆ ಒಳಪಡಿಸುವ ಮುನ್ನವೇ ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net