VIDEO | ದಾರಿಹೋಕನಿಗೆ ತಿವಿದು, ಹತ್ಯೆಗೈದ ಗೂಳಿ! ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವಿಜಯವಾಣಿ - 2024-01-25T153616.745
Published on

ಬರೇಲಿ: ಹೆಚ್ಚುತ್ತಿರುವ ಬಿಡಾಡಿ ದನ, ಗೂಳಿಗಳ ದಾಳಿಯಿಂದಾಗಿ ಜನಸಾಮಾನ್ಯರಲ್ಲಿ ತೀವ್ರ ಭಯ ಆವರಿಸಿದ್ದು, ದಿನನಿತ್ಯದ ಕೆಲಸಗಳಿಗಾಗಿ ಮನೆಯಿಂದ ಹೊರಗೆ ಬರಲೇಬೇಕು ಎಂಬ ಅನಿವಾರ್ಯತೆ ಇರುವುದರಿಂದ ಹೊರಬರುವ ಜನರಿಗೆ ಇದೀಗ ಭಾರೀ ಸಂಕಷ್ಟ ಎದುರಾಗಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಅಟ್ಟಾಡಿಸಿದ ಗೂಳಿ ಆತನನ್ನು ನೆಲಕ್ಕೆ ಕೆಡವಿಕೊಂಡು ಹೊಟ್ಟೆಗೆ ತಿವಿದ ಕಾರಣ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ವರದಿಯಾಗಿದೆ.

ಪ್ರಾಣಿಗಳ ಹಿಂಸಾತ್ಮಕ ದಾಳಿಯಲ್ಲಿ ಅನೇಕ ಜನರು ಗಂಭೀರವಾಗಿ ಗಾಯಗೊಂಡಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಬಿಡಾಡಿ ದನಗಳ ದಾಳಿ ಸಮಸ್ಯೆಗೆ ಇಲ್ಲಿಯವರೆಗೂ ಉತ್ತರಪ್ರದೇಶ ಸರ್ಕಾರ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದು ಜನರು ಆರೋಪಿಸಿದ್ದು, ಇಂತಹದೊಂದು ಘಟನೆ ಮತ್ತೊಮ್ಮೆ ವರದಿಯಾಗಿದೆ.

ಬುಧವಾರ (ಜ.24) ಬೆಳಗ್ಗೆ 8 ಗಂಟೆಗೆ ವೃದ್ಧ ತಮ್ಮ ಮನೆಯಿಂದ ವಾಕಿಂಗ್​ಗೆಂದು ಹೊರಬಂದಾಗ ಈ ಘಟನೆ ಸಂಭವಿಸಿದೆ. ಕಪ್ಪು ಗೂಳಿಯೊಂದು ಏಕಾಏಕಿ ದಾಳಿ ಮಾಡಿದ್ದು, ಅವರ ಹೊಟ್ಟೆಯ ಭಾಗಕ್ಕೆ ಪದೇ ಪದೇ ತಿವಿದಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಸ್ಥಳದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net