ಯೂಟ್ಯೂಬ್​ ಲೈವ್​ನಲ್ಲೇ 1.5 ಲೀಟರ್​ ವೋಡ್ಕಾ ಕುಡಿದ ಮಹಾಶಯ! ಮುಂದೇನಾಯ್ತು ಗೊತ್ತಾ?

vodka
Published on

ಮಾಸ್ಕೋ: ಹಣಕ್ಕಾಗಿ ಏನನ್ನಾದರೂ ಮಾಡುವ ಜನರಿದ್ದಾರೆ. ಅದೇ ರೀತಿ ಹಣಕ್ಕಾಗಿ ಕಂಠ ಪೂರ್ತಿ ವೋಡ್ಕಾ ಕುಡಿದ ಮಹಾಶಯನೊಬ್ಬನ ಕಥೆ ಏನಾಯ್ತು ಎಂದು ಕೇಳಿದರೆ ನೀವು ಗಾಬರಿಯಾಗುತ್ತೀರ.

ರಷ್ಯಾದಲ್ಲಿ ಯೂಟ್ಯೂಬ್​ ಲೈವ್​ ಸ್ಟ್ರೀಮಿಂಗ್​ ಗೇಮ್​ಗಳಿವೆ. ಸಾಹಸಮಯ ಕೆಲಸವನ್ನು ಕೆಲ ವ್ಯಕ್ತಿಗಳಿಂದ ಮಾಡಿಸಿ, ಅದಕ್ಕೆ ವೀಕ್ಷಕರಿಂದ ದುಡ್ಡು ಕೀಳಲಾಗುತ್ತದೆ. ಅದೇ ರೀತಿ ಗುರುವಾರ ಕೂಡ ಒಂದು ಹೊಸ ಗೇಮ್​ ಇಡಲಾಗಿತ್ತು. 60 ವರ್ಷದ ವ್ಯಕ್ತಿಯೊಬ್ಬ ವೋಡ್ಕಾ ಕುಡಿಯುವ ಗೇಮ್​ ಅದು. ಆತ ಹೆಚ್ಚೆಚ್ಚು ವೋಡ್ಕಾ ಕುಡಿಯಲಿ ಎಂದು ವೀಕ್ಷಕರು ಹಣ ಹಾಕುತ್ತಿದ್ದರಂತೆ.

ಈ ರೀತಿ ವೋಡ್ಕಾ ಕುಡಿಯಲು ಆರಂಭಿಸಿದ ಯೂರಿ ದುಶೆಚ್ಕಿನ್ ಹೆಸರಿನ ವ್ಯಕ್ತಿ ಬರೋಬ್ಬರಿ 1.5 ಲೀಟರ್​ ವೋಡ್ಕಾ ಕುಡಿದಿದ್ದಾನೆ. ಅದಾದ ನಂತರ ಅಲ್ಲೇ ಕೆಳಕ್ಕೆ ಕುಸಿದು ಬಿದ್ದಿದ್ದಾನೆ. ಇಷ್ಟಾದರೂ ಯೂಟ್ಯೂಬ್​ ಲೈವ್​ ಸ್ಟ್ರೀಮಿಂಗ್​ ನಿಲ್ಲಿಸಿಲ್ಲ. ಸ್ವಲ್ಪ ಸಮಯದಲ್ಲೇ ಆತ ಮೃತನಾಗಿರುವುದು ತಿಳಿದುಬಂದಿದೆ. ಯೂಟ್ಯೂಬ್​ ಲೈವ್​ ಸ್ಟ್ರೀಮಿಂಗ್ ಇರುವಾಗಲೇ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಕ್ಕೆ ವೀಕ್ಷಕರು ಸಾಕ್ಷಿಯಾಗಿದ್ದಾರೆ.

ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ವೋಡ್ಕಾ ಕುಡಿದಿದ್ದರಿಂದಲೇ ಆತ ಮೃತನಾಗಿದ್ದಾನೆ ಎನ್ನುವುದಕ್ಕೆ ಇನ್ನೂ ದೃಢೀಕರಣ ಸಿಕ್ಕಿಲ್ಲವೆಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net