ಫುಡ್‌ ಡೆಲಿವರಿಗಾಗಿ ಡ್ರೋನ್ ನಿರ್ಮಿಸಿದ ಯುವಕ; ವಿಡಿಯೋ ನೋಡಿದ ನೆಟ್ಟಿಗರು ಫುಲ್ ಖುಷ್

drone
Published on

ನವದೆಹಲಿ: ಸಾಕಷ್ಟು ಮಂದಿ ಎಲ್ಲಾ ಕೆಲಸಗಳು ಥಟ್​ ಅಂತ ಆಗಬೇಕೆಂದು ಅಂದುಕೊಳ್ಳುತ್ತಾರೆ. ಅದಕ್ಕಾಗಿಯೇ ಹೊಸ ಹೊಸ ವಸ್ತುಗಳ ಆವಿಷ್ಕಾರ ನಡೆಯುತ್ತಲೇ ಇರುತ್ತದೆ. ಇದೀಗ ಫುಡ್​​ ಡೆಲಿವರಿಗಾಗಿ ವಿಶೇಷ ಪ್ಲ್ಯಾನ್​​ ಒಂದನ್ನು ಮಾಡಲಾಗಿದೆ.

ಸಾಮಾನ್ಯವಾಗಿ ಡೆಲಿವರಿ​ ಬಾಯ್ಸ್ ಸರಿಯಾದ ಅಡ್ರೆಸ್ ಸಿಗದೆ ಗಲ್ಲಿ ಗಲ್ಲಿಗಳಲ್ಲಿ ಸುತ್ತುತ್ತಾರೆ. ಕಷ್ಟಪಟ್ಟು ಅಡ್ರೆಸ್ ಹುಡುಕಿ ಮನೆ ಬಾಗಿಲಿಗೆ ಆಹಾರ ತಲುಪಿಸಿದರೆ ಲೇಟಾಗಿ ಬಂದಿದ್ದಕ್ಕೆ ಮನೆಯವರಿಂದಲೂ ಬೈಸಿಕೊಳ್ಳುತ್ತಾರೆ. ಮಳೆ ಬಂದು ಟ್ರಾಫಿಕ್ ಜಾಮ್ ಆದರಂತೂ ಹೇಳುವುದೇ ಬೇಡ. ಸರಿಯಾದ ಸಮಯಕ್ಕೆ ಫುಡ್ ತಲುಪಿಸಲು ಸಾಧ್ಯವಾಗದೆ ಒದ್ದಾಡುತ್ತಾರೆ. ಈ ಕಷ್ಟವನ್ನು ಮನಗಂಡ ಡೆಲಿವರಿ​ ಬಾಯ್ ಸೋಹನ್ ರೈ ಆಹಾರ ವಿತರಿಸುವ ಡ್ರೋನ್​​ ಒಂದನ್ನು ಕಂಡು ಹಿಡಿದಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ವಿಡಿಯೋ ಹಂಚಿಕೊಂಡ ಸೋಹನ್‌ ರೈ, ಜೊಮ್ಯಾಟೋ ಡೆಲಿವರಿ ಬಾಯ್ಸ್ ಫುಡ್‌ ವಿತರಿಸಲು ಕಷ್ಟಪಡುವುದನ್ನು ನೋಡಿ ಡ್ರೋನ್ ತಯಾರಿಸಲು ಮುಂದಾಗಿರುವುದಾಗಿ ಹೇಳಿದ್ದಾರೆ. ಈ ವಿಡಿಯೋ ಡ್ರೋನ್‌ ತಯಾರಿಸುವ ಹಲವು ಹಂತಗಳನ್ನು ವಿವರಿಸುತ್ತದೆ. ರೈ ಅವರ ಕೌಶಲ ಮತ್ತು ಸೃಜನಶೀಲತೆಯನ್ನು ಅತ್ಯುತ್ತಮವಾಗಿ ಪ್ರದರ್ಶಿಸುತ್ತದೆ. ಸೋಹನ್‌ ರೈ ಅವರ ಈ ಪ್ರಯತ್ನವು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. ಆಹಾರ ವಿತರಿಸುವ ಈ ವಿಶಿಷ್ಟ ಡ್ರೋನ್‌ನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋ 8.8 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ವಿಡಿಯೋ ನೋಡಿ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. "ಆರ್ಡರ್​ ಮಾಡಿದ ವ್ಯಕ್ತಿ ಕ್ಯಾಶ್​ ಆಂಡ್​ ಡೆಲಿವರಿ ಚೂಸ್​ ಮಾಡಿದ್ರೆ ಏನು ಮಾಡೋದು ಅಂದರೆ, ಮತ್ತೋರ್ವ, ಜೊಮ್ಯಾಟೋ ಡೆಲಿವರಿ ಬಾಯ್ಸ್ ತುಂಬಾ ಕಷ್ಟಪಟ್ಟು ಕೆಲಸ ಮಾಡ್ತಾರೆ. ಈ ಡ್ರೋನ್‌ನ ಮೂಲಕ ಅವರ ಕೆಲಸವನ್ನು ಕಿತ್ತುಕೊಳ್ಳುವುದು ಬೇಡ ಎಂದು ಇನ್ನೊಬ್ಬರು ಅನುಕಂಪ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಆಹಾರ ವಿತರಿಸುವ ಡ್ರೋನ್ ಇಂಟರ್‌ನೆಟ್‌ನಲ್ಲಿ ಸಖತ್ ಸುದ್ದಿ ಮಾಡ್ತಿರೋದಂತೂ ನಿಜ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net