

ಮುಂಬೈ: ತನಗೆ 25 ವರ್ಷವಾಯಿತು ಎಂದು ಒಟ್ಟು 25 ಕೇಕ್ಗಳನ್ನು ಕಟ್ ಮಾಡಿದವನನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲ ಇವನೊಂದಿಗೆ ಇನ್ನೂ ಇಬ್ಬರನ್ನೂ ಬಂಧಿಸಿದ್ದಾರೆ.
ಅಯ್ಯೋ, ಕೇಕ್ ಕತ್ತರಿಸಿದರೆ ಬಂಧನವಾ? ಎಂದು ಗೊಂದಲ ಬೇಡ. ಪೊಲಿಸರು ಈ ಮೂವರ ವಿರುದ್ಧ ಕ್ರಮ ಕೈಗೊಳ್ಳಲು ಬಲವಾದ ಕಾರಣ ಇದೆ. ಈ ಮೂವರೂ ಲಾಕ್ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ.
ಮುಂಬೈನಲ್ಲಿ ಘಟನೆ ನಡೆದಿದೆ. ಸರ್ಕಾರ ಹೇರಿರುವ ಲಾಕ್ಡೌನ್ ಮೀರಿ ಹಲವರು ಗುಂಪುಗೂಡಿ ಬರ್ತ್ ಡೇ ಪಾರ್ಟಿ ಆಚರಿಸಿದ್ದಾರೆ.
ಬಾಂದ್ರಾದ ನಿವಾಸಿ ಹ್ಯಾರಿಸ್ ಖಾನ್ ಎಂಬಾತ ತನ್ನ 25 ನೇ ವರ್ಷದ ಬರ್ತ್ ಡೇಯನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ನಿರ್ಧರಿಸಿ, 25 ಕೇಕ್ಗಳನ್ನು ರೆಡಿ ಮಾಡಿಸಿದ್ದ. ತಮ್ಮ ಮನೆಯ ಟೆರೇಸ್ ಮೇಲೆಯೇ ಭರ್ಜರಿ ಪಾರ್ಟಿಯನ್ನೂ ಆಯೋಜಿಸಿದ್ದ. ಅದಕ್ಕಾಗಿ ಅತಿಥಿಗಳು, ಸ್ನೇಹಿತರನ್ನೂ ಆಹ್ವಾನಿಸಿದ್ದ. ಅಂತೆಯೇ ಪಾರ್ಟಿಯಲ್ಲಿ 25 ಮಂದಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಅಸಭ್ಯ ಸಂದೇಶಗಳಿಂದ ಬೇಸತ್ತು ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಲು ಮುಂದಾದ ನಟಿ ಮಾನಸಿ ಜೋಶಿ
ಅಲ್ಲಿ ನೆರೆದಿದ್ದವರು ಮಾಸ್ಕ್ ಧರಿಸಿರಲಿಲ್ಲ. ಹಾಗೇ ಸಾಮಾಜಿಕ ಅಂತರ ನಿಯಮವೂ ಪಾಲನೆಯಾಗಿರಲಿಲ್ಲ. ಮತ್ತೂ ಒಂದು ಅಪರಾಧವೆಂದರೆ ಹ್ಯಾರಿಸ್, 25 ಕೇಕ್ಗಳನ್ನು ತಲ್ವಾರ್ನಿಂದ ಕತ್ತರಿಸಿದ್ದ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದನ್ನು ನೋಡಿದ ಪೊಲೀಸರು ಹ್ಯಾರಿಸ್ ಮತ್ತು ಅಲ್ಲಿ ನೆರೆದಿದ್ದ ಎಲ್ಲರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಅವರಲ್ಲಿ ಹ್ಯಾರಿಸ್ ಸೇರಿ ಮೂವರನ್ನು ಬಂಧಿಸಿದ್ದಾರೆ.(ಏಜೆನ್ಸೀಸ್)