ಸತತ 16 ದಿನಗಳಿಂದ ಹಸಿ ಚಿಕನ್ ತಿನ್ನುತ್ತಿರುವ ವ್ಯಕ್ತಿ…ಕಾರಣ ಕೇಳಿದ್ರೆ ಬೆರಗಾಗೋದು ಗ್ಯಾರಂಟಿ!

chicken
Published on

ಬೆಂಗಳೂರು: ಜಗತ್ತಿನಲ್ಲಿ ವಿಚಿತ್ರವಾದ ಕೆಲಸಗಳನ್ನು ಮಾಡುವವರಿಗೆ ಕೊರತೆಯಿಲ್ಲ. ಕೆಲವೊಮ್ಮೆ ಪ್ರಯೋಗ ಮಾಡಲು ಅಥವಾ ಪ್ರಸಿದ್ಧರಾಗಲು ಜನರು ಅಸಾಮಾನ್ಯ ಕೆಲಸವನ್ನೂ ಪ್ರಾರಂಭಿಸುತ್ತಾರೆ. ಇಲ್ಲೊಬ್ಬ ವ್ಯಕ್ತಿಯು ಇದೇ ರೀತಿಯ ಕೆಲಸವನ್ನು ಮಾಡುತ್ತಿದ್ದಾನೆ. ಕಳೆದ 16 ದಿನಗಳಿಂದ ಅವನು ಹಸಿ ಚಿಕನ್ ತಿನ್ನುತ್ತಿದ್ದಾನೆ. ಹಸಿ ಚಿಕನ್ ತಿನ್ನುವ ಈ ಪ್ರಯೋಗವನ್ನು ಹೊಟ್ಟೆನೋವು ಬರುವವರೆಗೆ ಅಥವಾ ಅನಾರೋಗ್ಯಕ್ಕೆ ತುತ್ತಾಗುವವರೆಗೆ ಮುಂದುವರಿಸುತ್ತೇನೆ ಎನ್ನುತ್ತಾನೆ.

ಈ ವ್ಯಕ್ತಿಯ ಹೆಸರು ಜಾನ್ ಎಂದು ವರದಿಯಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ, ಅವರು ಹಸಿ ಚಿಕನ್​ ತಿನ್ನುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡುತ್ತಲೇ ಬಂದಿದ್ದಾರೆ. ಅದಕ್ಕೆ ‘ರಾ ಚಿಕನ್ ಪ್ರಯೋಗ’ ಎಂದು ಹೆಸರಿಟ್ಟಿದ್ದಾರೆ. ಜೊತೆಗೆ ವಿಡಿಯೋದಲ್ಲಿ, ಅವರು ಹಸಿ ಚಿಕನ್ ಜ್ಯೂಸ್ ಕುಡಿಯುವುದು ಮತ್ತು ಹಸಿ ಮೊಟ್ಟೆಗಳನ್ನೂ ತಿನ್ನುವುದನ್ನೂ ಸಹ ನೋಡಬಹುದು.

ವ್ಯಕ್ತಿ ಹೇಳಿದ್ದೇನು?

ವ್ಯಕ್ತಿಯು ವಿಡಿಯೋದಲ್ಲಿ "ಹೊಸ ಮತ್ತು ವಿಭಿನ್ನವಾದ ಕೆಲಸ ಮಾಡಲು ಇಷ್ಟಪಡುತ್ತೇನೆ. ಏನಾದರೂ ಮಾಡಬೇಡಿ ಎಂದು ಜನ ಹೇಳಿದಾಗ ಆ ಕೆಲಸದಲ್ಲಿ ಆಸಕ್ತಿ ಹೆಚ್ಚುತ್ತದೆ'' ಎಂದು ಹೇಳಿದ್ದಾನೆ. ಪೋಸ್ಟ್‌ನಲ್ಲಿ 16ನೇ ದಿನವೂ ಕೆಲಸದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಾಸ್ಯಮಯವಾಗಿ ಹೇಳುತ್ತಿರುವುದು ಕಂಡುಬಂದಿದೆ.

ಗಟ್ಟಿ ಮಲ

ಪ್ರಯೋಗ 16 ನೇ ದಿನಕ್ಕೆ ತಲುಪುವುದು ಕ್ರೇಜಿ ಎಂದು ಜಾನ್ ಹೇಳಿದ್ದಾನೆ. ಚಿಕನ್ ಸೇವಿಸಿದ ಮೇಲೆ ಇಲ್ಲಿಯವರೆಗೆ ನನ್ನ ಎಲ್ಲಾ ಮಲವು ಗಟ್ಟಿಯಾಗಿದೆ. ನಾವು ಇಲ್ಲಿ ನಿರೀಕ್ಷಿಸಿದಂತೆ ಅಲ್ಲ. ಅದೃಷ್ಟವಶಾತ್ ಚಿಕನ್ ತಿನ್ನಲು ಸಾಕಷ್ಟು ಮಾರ್ಗಗಳಿವೆ ಎಂದಷ್ಟೇ ಅವನು ಹೇಳಿದ್ದಾನೆ. ಅಂದಹಾಗೆ ಇದರಿಂದ ಇಲ್ಲಿಯವರೆಗೆ ಯಾವುದೇ ಸಮಸ್ಯೆ ಎದುರಾಗಿಲ್ಲವಂತೆ.

ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡ ಜಾನ್, "ನನ್ನ ಅಸಂಬದ್ಧ ವರ್ತನೆ ಮತ್ತು ವಿಚಿತ್ರ ಸವಾಲಿನ ಈ ವಿಡಿಯೋಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ವಿವಿಧ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಅದರ ರುಚಿಯನ್ನು ಕೇಳಿದ್ದಾರೆ'' ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net