VIDEO| ರೆಕಾರ್ಡ್​ ಮಾಡಲು ಮಗನಿಗೆ ಮೊಬೈಲ್ ಕೊಟ್ಟು ಪೂಜೆ ಮಾಡುತ್ತಲೇ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ!

Suicide
Published on

ವಿಜಯವಾಡ (ಆಂಧ್ರ ಪ್ರದೇಶ): ವಿಜಯವಾಡದ ತಡಿಗಡಪ ಮೂಲದ ಅರವತ್ತು ವರ್ಷದ ವ್ಯಕ್ತಿಯೊಬ್ಬ ಕನಕ ದುರ್ಗ ಸೇತುವೆಯಿಂದ ಕೃಷ್ಣಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.

ದುರ್ಗಾ ಪ್ರಸಾದ್​ ಮೃತ ದುರ್ದೈವಿ. ಸಹೋದರನ ಮಗನನ್ನು ಜತೆಯಲ್ಲಿ ಕರೆದುಕೊಂಡು ಕನಕ ದುರ್ಗಾ ಸೇತುವೆಗೆ ಪ್ರಸಾದ್​ ಆಗಮಿಸುತ್ತಾರೆ. ಬಳಿಕ ನದಿಗೆ ಪೂಜೆ ಸಲ್ಲಿಸುವುದಾಗಿ ಹೇಳಿ ರೆಕಾರ್ಡ್​ ಮಾಡಲು ಮಗನಿಗೆ ಮೊಬೈಲ್ ಜತೆಯಲ್ಲಿ ಪತ್ರವೊಂದನ್ನು​ ನೀಡುತ್ತಾನೆ. ಸೇತುವೆ ಮೇಲೆ ನಿಂತು ಪೂಜೆ ಮಾಡುತ್ತಾ ಮಗನಿಗೆ ಸ್ವಲ್ಪ ದೂರಕ್ಕೆ ಸರಿಯುವಂತೆ ಹೇಳಿ ದಿಢೀರನೇ ನದಿಗೆ ಹಾರುತ್ತಾನೆ.

ಮೊದಲೇ ಮಳೆಯಿಂದ ತುಂಬಿ ಹರಿಯುತ್ತಿದ್ದ ನದಿಯಲ್ಲಿ ಪ್ರಸಾದ್​ ಮಗನ ಕಣ್ಣೆದುರಲ್ಲೇ ಕೊಚ್ಚಿ ಹೋಗುತ್ತಾನೆ. ಇದನ್ನು ನೋಡಿದ ಮಗನಿಗೆ ದಿಕ್ಕೇ ತೋಚದಂತಾಗುತ್ತದೆ. ಕೊನೆಗೆ ಸ್ಥಳಕ್ಕೆ ಆಗಮಿಸುವ ಪೊಲೀಸರು ಮಗನ ಕೈಯಲ್ಲಿದ್ದ ಡೆತ್​ ನೋಟ್​ ನೋಡುತ್ತಾರೆ. ಅದರಲ್ಲಿ ಅನಾರೋಗ್ಯವನ್ನು ಸಹಿಸದೇ ಆತ್ಮಹತ್ಯೆ ಶರಣಾಗಿದ್ದಾಗಿ ಉಲ್ಲೇಖಿಸಿದ್ದಾರೆ. ಇದೀಗ ದುರ್ಗಾ ಪ್ರಸಾದ್​ ದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net