ಒಂದಲ್ಲ, ಎರಡಲ್ಲ, ಏಳು ಮಕ್ಕಳೊಂದಿಗೆ ಸ್ಕೂಟಿ ಸವಾರಿ ಮಾಡುತ್ತಿರುವ ವ್ಯಕ್ತಿ ವಿಡಿಯೋ ವೈರಲ್​...!

mumbai man
Published on

ಮುಂಬೈ: ವ್ಯಕ್ತಿಯೊರ್ವ ಏಳು ಮಕ್ಕಳೊಂದಿಗೆ ಸ್ಕೂಟಿ ಸವಾರಿ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಇದನ್ನೂ ಓದಿ: ಲಂಡನ್ ನಗರದಲ್ಲಿ ಭಾರತೀಯ ಮನಃಶಾಸ್ತ್ರಜ್ಞ ಅಂದರ್! ಈತ ಹೆಸರಿಗಷ್ಟೇ ಡಾಕ್ಟರ್…

ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಟ್ವಿಟರ್ ಬಳಕೆದಾರನೊಬ್ಬ ಈ ಕುರಿತಾದ ವಿಡಿಯೋವೊಂದನ್ನು ಪೋಸ್ಟ್​​ ಮಾಡಿ, ಈ ಬೇಜವಾಬ್ದಾರಿ ವ್ಯಕ್ತಿ ಸ್ಕೂಟರ್‌ನಲ್ಲಿ ಏಳು ಮಕ್ಕಳೊಂದಿಗೆ ಸವಾರಿ ಮಾಡುತ್ತಿದ್ದಾನೆ. ಏಳು ಪುಟ್ಟ ಮಕ್ಕಳ ಪ್ರಾಣಕ್ಕೆ ಅಪಾಯ ತಂದಿರುವ ಆತನನ್ನು ಕೂಡಲೇ ಬಂಧಿಸಬೇಕು. ಈ ಮಕ್ಕಳ ಪೋಷಕರ ಮೇಲೂ ಕಾನೂನು ಕ್ರಮ ಜರುಗಿಸಬೇಕು ಎಂದು ಟ್ವೀಟ್​​ ಮಾಡಿದ್ದರು.

ಇದನ್ನು ಗಂಭೀರವಾಗಿ ತೆಗೆದುಕೊಂಡ ಮುಂಬೈ ಪೊಲೀಸರು ಆತನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ಗುರುತನ್ನು ಬಹಿರಂಗಪಡಿಸದೇ, ಅದೇ ಸ್ಕೂಟರ್‌ನಲ್ಲಿ ಸವಾರನ ಮುಖವನ್ನು ಮಾರ್ಫಿಂಗ್ ಮಾಡಿದ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಭಾರೀ ಮಳೆಗೆ ಬಿದ್ದ ಮದುವೆ ಮನೆ ಪೆಂಡಲ್​​; 8 ಮಂದಿ ಸ್ಥಿತಿ ಗಂಭೀರ

ಜತೆಗೆ, 40 ವರ್ಷದ ಆರೋಪಿಯು ಹಿಂಬದಿಯ ಸವಾರರ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಿದ್ದು, ಆತನ ವಿರುದ್ಧ ನರಹತ್ಯೆಗೆ ಯತ್ನಿಸಿದ್ದಕ್ಕಾಗಿ ಯು/ಸೆಕ್ಷನ್ 308 ಐಪಿಸಿ ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net