

ನವದೆಹಲಿ: ವ್ಯಕ್ತಿಯೊಬ್ಬ ಬೀದಿನಾಯಿಯ ಮೇಲೆ ಅತ್ಯಾಚಾರ ಎಸಗುತ್ತಿರುವ ಆಘಾತಕಾರಿ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈತನ ಕೃತ್ಯಕ್ಕೆ ಇದೀಗ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಈ ಘಟನೆ ದೆಹಲಿಯ ಹರಿ ನಗರ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ವ್ಯಕ್ತಿಯೊಬ್ಬ ಬೀದಿ ನಾಯಿಯ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತನ್ನ ಮೊಬೈಲ್ನಲ್ಲಿ ವೀಡಿಯೋ ಮಾಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ವರದಿಯಾಗಿದೆ. ವೀಡಿಯೋ ಸಹಿತ ದಾಖಲೆ ನೀಡಿದರೂ ಪೊಲೀಸರು ಮಾತ್ರ ಕೃತ್ಯ ಎಸಗಿದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ವರದಿಯಾಗಿದೆ. ಈ ಕೃತ್ಯವನ್ನು ತರುಣ್ ಅಗರ್ವಾಲ್ ಎಂಬುವವರು ಟ್ವೀಟ್ ಮಾಡುತ್ತಿದ್ದಂತೆ ಅನೇಕ ಪ್ರಾಣಿ ಪ್ರಿಯರು ಕೃತ್ಯ ಎಸಗಿದಾತನನ್ನು ಪತ್ತೆ ಮಾಡಿ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸದಸ್ಯ ಪಂಖೂರಿ ಪಾಠಕ್ ಈ ಬಗ್ಗೆ ಧ್ವನಿ ಎತ್ತಿದ್ದು, ಪ್ರಕರಣ ದಾಖಲಿಸದ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ದೆಹಲಿ ಪೊಲೀಸರು ಮತ್ತು ಇತರ ಕೆಲವು ಅಧಿಕಾರಿಗಳನ್ನು ಟ್ಯಾಗ್ ಮಾಡಿದ ಅವರು ಟ್ವೀಟ್ ಮಾಡಿದ್ದಾರೆ, "ಎಫ್ಐಆರ್ ದಾಖಲಿಸಿ ಈ ದುಷ್ಕರ್ಮಿಯನ್ನು ಬಂಧಿಸದೆ ಹೋದಲ್ಲಿ ದೆಹಲಿ ಪೋಲೀಸರು ಅತ್ಯಾಚಾರಿಯನ್ನು ರಕ್ಷಿಸುತ್ತಿದೆ ನಾವು ಸ್ಪಷ್ಟವಾಗಿ ಹೇಳೋಣ ಎಂದು ಹೇಳಿದ್ದಾರೆ.
ಸದ್ಯ ಘಟನೆಯ ಬಗ್ಗೆ ದೆಹಲಿ ಪೊಲೀಸರು ಟ್ವೀಟ್ ಮಾಡಿ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕೃತ್ಯ ಎಸಗಿದಾತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)