

ನವದೆಹಲಿ: ಶೌಚಾಲಯದಲ್ಲಿ ಅಡಗಿದ್ದ ವಿಷಕಾರಿ ಸರ್ಪವೊಂದನ್ನು ವ್ಯಕ್ತಿಯೊಬ್ಬ ರಕ್ಷಣೆ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ: ಅಡಕೆ ಖರೀದಿ ಹಣ ಕದ್ದ ಇಬ್ಬರ ಬಂಧನ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಶರವೇಗದಲ್ಲಿ ಸಾಗುತ್ತಿದೆ. ಜಗತ್ತಿನಾದ್ಯಂತ ಯಾವುದೇ ಮೂಲೆಯಲ್ಲಿ ಏನೇ ಘಟನೆಗಳು ಸಂಭವಿಸಿದರು, ಅದು ಕ್ಷಣಮಾತ್ರದಲ್ಲಿ ಎಲ್ಲರಿಗೂ ತಲುಪುವಂತೆ ಮಾಡುವ ಸಾಮರ್ಥ್ಯವನ್ನು ಸೋಷಿಯಲ್ ಮೀಡಿಯಾ ಹೊಂದಿದೆ. ಘಟನೆಯ ಒಂದು ಫೋಟೋ ಅಥವಾ ಕಿರು ವಿಡಿಯೋ ಹರಿದಾಡಿದರೆ ಸಾಕು ಕ್ಷಣಗಳಲ್ಲಿ ನೆಟ್ಟಿಗರಿಂದ ವ್ಯಾಪಕ ಅಭಿಪ್ರಾಯಗಳು ವ್ಯಕ್ತವಾಗುತ್ತದೆ.
ಈ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದೆ. ಮನೆಯ ಶೌಚಾಲಯದೊಳಗೆ ಅಡಗಿದ್ದ ವಿಷ ಸರ್ಪವನ್ನು ವ್ಯಕ್ತಿಯೊಬ್ಬರು ಜಾಗರೂಕತೆಯಿಂದ ಸೆರೆಹಿಡಿದ ದೃಶ್ಯ ಭಾರೀ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು, ವ್ಯಕ್ತಿಯ ಧೈರ್ಯವನ್ನು ಮೆಚ್ಚಿ ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).