ಪತ್ನಿ ಕೊಂದು ಸ್ಕೂಟರ್​ನಲ್ಲಿ ಶವವಿಟ್ಟುಕೊಂಡು ತೆರಳಿದ್ದ ವ್ಯಕ್ತಿಗೆ ಕಾದಿತ್ತು ಶಾಕ್​..!

Deadbody
Published on

ಅಹಮದಾಬಾದ್​: ಹಾಡಹಗಲೇ ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಆಕೆಯ ಶವವನ್ನು ಸ್ಕೂಟರ್​ ಮೇಲಿಟ್ಟುಕೊಂಡು ಸುಮಾರು 10 ಕಿ.ಮೀ ವರೆಗೆ ಸವಾರಿ ಮಾಡಿದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ.

ಘಟನೆಯು ಗುಜರಾತಿನ ಪಲಿಟನಾ ಪಟ್ಟಣದ ಬಳಿಯಿರುವ ಗ್ರಾಮದ ಬಳಿ ಕಳೆದ ಭಾನುವಾರ ನಡೆದಿದೆ. ಆರೋಪಿ ಅಮಿತ್​ ಹೆಮ್ನಾನಿ ಪತ್ನಿಯ ಶವವನ್ನು ಸ್ಕೂಟರ್​ನಲ್ಲಿಟ್ಟುಕೊಂಡು ಹೋಗುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಬಂಧಿಸಲು ನೆರವಾಗಿದ್ದಾರೆ.

ಅಮಿತ್​ ವರ್ಷದ ಹಿಂದಷ್ಟೇ ನೈನಾ ಎಂಬಾಕೆಯನ್ನು ಮದುವೆಯಾಗಿದ್ದ. ಕ್ಲುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ತಾರಕಕ್ಕೇರಿಸಿದ ಗಲಾಟೆಯಿಂದ ನಿಯಂತ್ರಣ ಕಳೆದುಕೊಂಡು ಅಮಿತ್​, ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ಶವವನ್ನು ಸ್ಕೂಟರ್​ನಲ್ಲಿ ಹಾಕಿಕೊಂಡು ತೆರಳಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪತ್ನಿಯ ಶವವನ್ನು ಅರಣ್ಯ ಪ್ರದೇಶದ ಬಳಿ ಎಸೆದುಬರಲು ತೆಗೆದುಕೊಂಡು ಹೋಗುತ್ತಿದ್ದುದ್ದಾಗಿ ಆರೋಪಿ ಅಮಿತ್​, ಪೊಲೀಸ್​ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net