ತನ್ನ ಭುಜದ ಮೇಲೆ ಮೊಸಳೆಯನ್ನು ಹೊತ್ತೊಯ್ದ ಭೂಪ; ಬಾಹುಬಲಿ ಇವನು ಎಂದ ನೆಟ್ಟಿಗರು

Untitled design - 2023-10-21T154836.761
Published on

ಲಲಿತ್‌ಪುರ, ಉತ್ತರಪ್ರದೇಶ: ವ್ಯಕ್ತಿಯೊಬ್ಬ ಅಪಾಯಕಾರಿ ಮೊಸಳೆಯನ್ನು ತನ್ನ ಹೆಗಲ ಮೇಲೆ ಯಾವುದೇ ಭಯವಿಲ್ಲದೆ ಹೊತ್ತುಕೊಂಡು ಹೋಗುತ್ತಿರುವ ದೃಶ್ಯವೊಂದು ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಒಮ್ಮೆ ಅಚ್ಚರಿಗೊಂಡಿದ್ದಾರೆ.

ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವ್ಯಕ್ತಿಯೊಬ್ಬ ಮೊಸಳೆಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಇತರ ಸ್ನೇಹಿತರೊಂದಿಗೆ ಹೋಗುತ್ತಿರುವ ದೃಶ್ಯ ಅನೇಕರ ಗಮನವನ್ನು ಸೆಳೆದಿದ್ದು, ಕೆಲವರ ಕೆಂಗಣ್ಣಿಗೂ ಕೂಡ ಗುರಿಯಾಗಿದೆ.

ಚರಂಡಿಯಲ್ಲಿ ಸಿಲುಕಿದ್ದ ಮೊಸಳೆಯನ್ನು ಕಂಡ ವ್ಯಕ್ತಿ, ಅದನ್ನು ಹೊಳೆಗೆ ಬಿಡಬೇಕು ಎಂಬ ಯೋಚನೆಯಿಂದ ಹಿಡಿದು ತನ್ನ ಹೆಗಲ ಮೇಲೆ ಹೊತ್ತೊಕೊಂಡು ಹೋಗಿದ್ದಾನೆ ಎಂದು ಹೇಳಲಾಗಿದೆ. ಈ ಒಂದು ಘಟನೆ ಉತ್ತರಪ್ರದೇಶದ ಲಲಿತ್‌ಪುರನಲ್ಲಿ ವರದಿಯಾಗಿದೆ.

ವೈರಲ್ ವಿಡಿಯೋ ನೋಡಿದ ನೆಟ್ಟಿಗರು, "ಈತ ನಿಜ ಜೀವನದ ಬಾಹುಬಲಿ" ಎಂದು ಕಾಮೆಂಟ್​ ಮಾಡಿದ್ದಾರೆ. ಮೊಸಳೆಯ ಹತ್ತಿರ ಹೋಗಲು ಹೆದರುವವರ ಮಧ್ಯೆ ಈ ವ್ಯಕ್ತಿ ಹೆಗಲ ಮೇಲೆ ಹೊತ್ತಿಕೊಂಡಿದ್ದಾನೆ. ಇವನ ಧೈರ್ಯವನ್ನು ಮೆಚ್ಚಬೇಕು. "ಮನುಷ್ಯ ಬೇರ್ ಗ್ರಿಲ್ಸ್ ರೀತಿ" ಎಂದು ಹಲವರು ಹೋಲಿಸಿ ಮಾತನಾಡಿದ್ದಾರೆ.

ಇನ್ನೂ ಕೆಲವರು ವ್ಯಕ್ತಿ ಮಾಡಿದ ಕೃತ್ಯವು ತುಂಬಾ ಅಪಾಯಕಾರಿ ಮತ್ತು ಯಾವುದೇ ನಾಗರಿಕರು ಈ ರೀತಿ ಪ್ರಯತ್ನಿಸಬಾರದು. ಯಾವುದೇ ತಜ್ಞರ ತರಬೇತಿಯಿಲ್ಲದೆ ಮೊಸಳೆಯನ್ನು ಹಿಡಿಯುವುದು ಮಾರಕವಾಗಬಹುದು. ಚರಂಡಿಯಲ್ಲಿ ಮೊಸಳೆ ಸಿಕ್ಕಿಬಿದ್ದಿರುವುದನ್ನು ಕಂಡು ಆ ವ್ಯಕ್ತಿ ಅರಣ್ಯ ಇಲಾಖೆ ಅಧಿಕಾರಿಗಳು ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ಮನುಷ್ಯ ತಾನೇ ಮೊಸಳೆ ಹಿಡಿಯಲು ಹೋಗಬಾರದಿತ್ತು ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net