More

    ವೈದ್ಯರೂ ಪತ್ತೆಹಚ್ಚಲಾಗದ ಸ್ಲೋ ಪಾಯ್ಸನ್​ ಕೊಟ್ಟು ಪತಿ, ಅತ್ತೆ, ಮಾವ ಸೇರಿ ಐವರನ್ನು ಕೊಂದಿದ್ದಳು ಸೊಸೆ: ಆ ವಿಷ ಯಾವುದು?

    ನಾಗಪುರ: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಒಂದೇ ಕುಟುಂಬದ ಐವರು ತಿಂಗಳೊಳಗೆ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಅ.18 ರಂದು ಸೊಸೆ ಮತ್ತು ಸಂಬಂಧಿ ಮಹಿಳೆಯ ಬಂಧನವಾಗಿತ್ತು. ಇವರಿಬ್ಬರು ಕಳೆದ ಒಂದು ತಿಂಗಳಿಂದ ಎಲ್ಲರಿಗೂ ಆಹಾರದಲ್ಲಿ ಸ್ಲೋ ಪಾಯ್ಸನ್ ನೀಡುತ್ತಿದ್ದುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಗೂಗಲ್​ನಲ್ಲಿ ಅತಿ ಭಯಂಕರ ವಿಷದ ಬಗ್ಗೆ ಸರ್ಚ್​ ಮಾಡಿ, ತೆಲಂಗಾಣದಿಂದ ತರಿಸಿಕೊಂಡು ಚಾಲಾಕಿತನ ಮೆರೆದ ಸೊಸೆ ಈಗ ಜೈಲುಪಾಲಾಗಿದ್ದಾಳೆ. ಇದರ ಪೂರ್ಣ ವಿವರ ಇಲ್ಲಿದೆ….

    ಇದನ್ನೂ ಓದಿ: “ಗಂಗೆ ಬಾರೆ ತುಂಗೆ ಬಾರೆ” ಸಿನಿಮಾ ನಟಿ ಸುನೈನಾ ಆಸ್ಪತ್ರೆಗೆ ದಾಖಲು
    ಸಂಘಮಿತ್ರ ಕುಂಬಾರೆ (22), ರೋಜಾ ರಾಮಟೆಕೆ (36) ಆರೋಪಿಗಳು. ಮೃತರನ್ನು ಸಂಘಮಿತ್ರ ಪತಿ ರೋಷನ್ ಕುಂಬಾರೆ, ಶಂಕರ ಕುಂಬಾರೆ (ಮಾವ), ವಿಜಯ (ಅತ್ತೆ), ಕೋಮಲ್ (ಅತ್ತಿಗೆ) ಮತ್ತು ವರ್ಷಾ ಉರಾಡೆ (ಅತ್ತೆಯ ಸಹೋದರಿ) ಸೆ.26ರಿಂದ ಅ.15ರ ನಡುವೆ ಮೃತಪಟ್ಟಿದ್ದರು.

    ಕೊಲ್ಲಲು ಕಾರಣ: ಅಕೋಲಾದ ಸಂಘಮಿತ್ರ ಮನೆಯವರ ವಿರೋಧದ ನಡುವೆ ಡಿಸೆಂಬರ್​ 2022 ರಲ್ಲಿ ರೋಷನ್ ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಮದುವೆಯ ನಂತರ ರೋಷನ್ ಥಳಿಸಲು ಆರಂಭಿಸಿದ್ದ. ಆತನ ಕುಟುಂಬಸ್ಥರೂ ಕೆಟ್ಟದಾಗಿ ನಡೆಸಿಕೊಂಡರು. ಆಕೆ ತಂದೆಗೆ ವಿಷಯ ತಿಳಿದಾಗ ಆತ ಏಪ್ರಿಲ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ತನ್ನ ತವರಿಗೆ ಹೋಗಬೇಕೆಂದು ಒತ್ತಾಯಿಸಿದರೂ ಪತಿ ಮತ್ತು ಅತ್ತೆ ಇದಕ್ಕೆ ಅನುಮತಿಸಲಿಲ್ಲ. ಇದರಿಂದ ಆಕೆ ಚಿಂತತೆಗೀಡಾದಳು.

    ಈ ವಿಷ ವೈದ್ಯಕೀಯ ಪರೀಕ್ಷೆಯಲ್ಲೂ ಪತ್ತೆಯಾಗದು!: ಆಸ್ತಿ ವಿಚಾರವಾಗಿ ಸಂಬಂಧಿ ರೋಜಾ ಹಾಗೂ ಸಂಗಮಿತ್ರಾ ಅತ್ತೆ ವಿಜಯಾ ನಡುವೆ ಜಗಳ ನಡೆಯುತ್ತಿತ್ತು. ಇದನ್ನು ಅರಿತಿದ್ದ ಸಂಘಮಿತ್ರಾ ರೋಜಾಗೆ ತನ್ನ ಅತ್ತೆಯನ್ನು ಕೊಲ್ಲಲು ಬಯಸಿರುವುದಾಗಿ ಹೇಳಿದಾಗ ಆಕೆ ಕೈಜೋಡಿಸುತ್ತಾಳೆ. ಇಬ್ಬರೂ ಸೇರಿ ಗೂಗಲ್ ನಲ್ಲಿ ಜನರನ್ನು ಕೊಲ್ಲಲು ಇರುವ ಮಾರ್ಗಗಳನ್ನು ಹುಡುಕುತ್ತಾರೆ. ಆಗ ಥಾಲಿಯಮ್ ವಿಷದ ಬಗ್ಗೆ ತಿಳಿದುಕೊಳ್ಳುತ್ತಾರೆ. ಇದರ ಸೇವನೆಯಿಂದ ವ್ಯಕ್ತಿಯು ಕ್ರಮೇಣ ಅನಾರೋಗ್ಯಕ್ಕೆ ಒಳಗಾಗಿ ಸಾಯುತ್ತಾನೆ. ವೈದ್ಯಕೀಯ ಪರೀಕ್ಷೆಯಲ್ಲಿ ಮಾನವ ದೇಹದಲ್ಲಿ ಥಾಲಿಯಮ್ ಅನ್ನು ಕಂಡುಹಿಡಿಯುವುದು ಕಷ್ಟ. ಹೀಗಾಗಿ ಸಿಕ್ಕಿಬೀಳುವುದಿಲ್ಲ ಎಂಬುದನ್ನು ಮನಗಾಣುತ್ತಾರೆ. ಬಳಿಕ ತೆಲಂಗಾಣದಿಂದ ವಿಷ ಖರೀದಿಸಿ ಸೆ.20 ರಂದು ಮೊದಲು ರೋಷನ್ ತಂದೆ ಶಂಕರ್ ಮತ್ತು ಆತನ ತಾಯಿ ವಿಜಯಾಗೆ ಆಹಾರದಲ್ಲಿ ಬೆರೆಸಿ ನೀಡುತ್ತಾರೆ. ಅವರ ಆರೋಗ್ಯ ಹದಗೆಟ್ಟು ಸೆ.26 ಮತ್ತು 27 ರಂದು ಮೃತಪಡುತ್ತಾರೆ. ನಂತರ ಅ.8 ರಂದು ಕೋಮಲ್, ಅ.14 ರಂದು ವರ್ಷ ಮತ್ತು ಅ.15 ರಂದು ರೋಷನ್ ಕೂಡ ಸಾವನ್ನಪ್ಪುತ್ತಾರೆ.

    ತುಟಿ ಕಪ್ಪಾಗಿದ್ದರೂ ವಿಷ ಪತ್ತೆಯಾಗಿರಲಿಲ್ಲ: ಸತ್ತವರೆಲ್ಲರೂ ಒಂದೇ ರೀತಿಯ ರೋಗಲಕ್ಷಣಗಳನ್ನು ಹೊಂದಿದ್ದರು. ಪ್ರತಿಯೊಬ್ಬರಿಗೂ ದೇಹದಲ್ಲಿ ಜುಮ್ಮೆನಿಸುವಿಕೆ, ಕೆಳ ಬೆನ್ನು ಮತ್ತು ತಲೆಯಲ್ಲಿ ತೀವ್ರವಾದ ನೋವು ಇತ್ತು. ತುಟಿಗಳು ಕಪ್ಪು ಬಣ್ಣಕ್ಕೆ ತಿರುಗಿದ್ದವು. ಆದರೆ ವಿಷ ಪತ್ತೆಯಾಗಿರಲಿಲ್ಲ ಎಂದು ವೈದ್ಯರು ತಿಳಿಸಿದ್ದರು. ಇದರ ನಂತರ, ಪೊಲೀಸರಿಗೆ ಆರೋಗ್ಯದಿಂದ ಇದ್ದ ಸಂಘಮಿತ್ರಾ ಬಗ್ಗೆ ಅನುಮಾನ ಬಂದಿತ್ತು. ಆಕೆಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಸಂಪೂರ್ಣ ಸತ್ಯ ಹೊರಬಂದಿದೆ. ರೋಜಾ ಪಾತ್ರವನ್ನೂ ಸಂಘಮಿತ್ರ ಬಹಿರಂಗಪಡಿಸಿದ್ದಾಳೆ. ಘಟನೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ ಸೊಸೆ ನೀಡಿದ ಸ್ಲೋಪಾಯ್ಸನ್​ಗೆ ಒಂದಿಡೀ ಕುಟುಂಬ ಅವಸಾನ ಕಂಡಿದೆ. ಆಕೆ ಜೈಲು ಸೇರಿದ್ದಾಳೆ.

    ‘ನನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ’; ಪ್ರಯಾಣಿಕನ ಬೆದರಿಕೆಗೆ ಆಕಾಸ ಫ್ಲೈಟ್​​ ತುರ್ತು ಭೂಸ್ಪರ್ಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts