

ಉತ್ತರ ಪ್ರದೇಶ : ಹಾವುಗಳು ಭೂಮಿಯ ಮೇಲಿನ ಅತ್ಯಂತ ವಿಷಕಾರಿ ಜೀವಿಗಳಲ್ಲಿ ಒಂದಾಗಿದೆ. ಹಾವುಗಳು ತಮ್ಮ ಜೀವಕ್ಕೆ ಅಪಾಯವಿದೆ ಎಂದೆನಿಸಿದಾಗಲೇ.. ಬೇರೆ ದಾರಿಯಿಲ್ಲದಿದ್ದಾಗ ಮಾತ್ರ ಹಾವುಗಳು ಕಚ್ಚುತ್ತವೆ ಎನ್ನುತ್ತಾರೆ ಪರಿಸರವಾದಿಗಳು. ಯುವಕನೊಬ್ಬ ತನಗೆ ಕಚ್ಚಿದ ಹಾವನ್ನು ಹಿಡಿದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಆಸ್ಪತ್ರೆಗೆ ತಂದಿದ್ದಾನೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಚಂದೌಲಿಯಲ್ಲಿ ಯುವಕನೊಬ್ಬನಿಗೆ ಹಾವು ಕಚ್ಚಿದೆ. ಆದರೆ ಯುವಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದು ತನಗೆ ಕಚ್ಚಿದ ಹಾವನ್ನು ತನ್ನೊಂದಿಗೆ ತಂದಿದ್ದಾನೆ. ಆಸ್ಪತ್ರೆಯಲ್ಲಿ ಈ ಘಟನೆಯೊಂದು ನಡೆದಿದೆ.
ಪ್ಲಾಸ್ಟಿಕ್ ಚೀಲದಲ್ಲಿ ಹಾವನ್ನು ಕಂಡು ಆಸ್ಪತ್ರೆ ಸಿಬ್ಬಂದಿ ಗಾಬರಿಗೊಂಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಏಕಾಏಕಿ ಹಾವು ಕಾಣಿಸಿಕೊಂಡಿದೆ. ಭಯದಿಂದಲೇ ವೈದ್ಯರು, ನರ್ಸ್‌ಗಳು ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅನಿರೀಕ್ಷಿತವಾಗಿ ಕಾಣಿಸಿಕೊಂಡ ಹಾವು ಆಸ್ಪತ್ರೆಯ ಸಾಮಾನ್ಯ ಕಾರ್ಯಚಟುವಟಿಕೆಗೆ ಕೆಲಕಾಲ ಅಡ್ಡಿಯಾಯಿತು. ಕಚ್ಚಿದ ಹಾವು ಯಾವುದೆಂದು ವೈದ್ಯರಿಗೆ ತಿಳಿದು ಸೂಕ್ತ ಚಿಕಿತ್ಸೆ ನೀಡಬಹುದು ಎಂಬುದೇ ಯುವಕ ಈ ರೀತಿ ಹಾವನ್ನು ತಂದಿರುವುದಕ್ಕೆ ಕಾರಣ ಎನ್ನುತ್ತಾರೆ ನೆಟ್ಟಿಗರು.