ರೂಲ್ಸ್​​ ಬ್ರೇಕ್​ ಮಾಡಿದ, ತಡೆದ ಟ್ರಾಫಿಕ್​ ಪೊಲೀಸಿನ ಕೈಕಚ್ಚಿದ!

cop
Published on

ಪುಣೆ: ಸಂಚಾರಿ ನಿಯಮ ಉಲ್ಲಂಘನೆ ಮಾಡಿದಾಗ ವಾಹನವನ್ನು ನಿಲ್ಲಿಸಿದ ಎಂಬ ಕಾರಣಕ್ಕೆ ಟ್ರಾಫಿಕ್​ ಪೊಲೀಸಿನ ಕೈಯನ್ನು ಕಚ್ಚಿ, ಬೆದರಿಕೆ ಹಾಕಿರುವ ಪ್ರಸಂಗ ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದಿದೆ. ಈ ರೀತಿ ವರ್ತಿಸಿದ 29 ವರ್ಷ ವಯಸ್ಸಿನ ಮಂಗೇಶ್​ ಶಮಾಕಾಂತ್​ ಕಾಳೆ ಎಂಬುವ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಬಂಧಿತ ಕಾಳೆ, ಸೋಮವಾರ(ಸೆ.20) ಮಧ್ಯರಾತ್ರಿ ಎರಂಡ್ವಾನಾ ಪ್ರದೇಶದಲ್ಲಿ ತೆರಳುತ್ತಿದ್ದಾಗ ಪೊಲೀಸ್​ ಸಿಬ್ಬಂದಿಯಾದ ಪರಮೇಶ್ವರ್​ ಪದಳೆ ಎಂಬುವರು ಟ್ರಾಫಿಕ್​ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಗಾಡಿ ನಿಲ್ಲಿಸಿದರು. ಆಗ ಕೋಪಗೊಂಡು ಅವರ ಮೇಲೆ ಕಲ್ಲೆಸೆದು, ಕೈಯನ್ನು ಕಚ್ಚಿದ್ದ ಆರೋಪಿ, ಕರ್ತವ್ಯನಿರತ ಪೊಲೀಸಿಗೆ ಬೆದರಿಕೆ ಕೂಡ ಹಾಕಿದ ಎನ್ನಲಾಗಿದೆ. ಡೆಕ್ಕನ್​ ಜಿಮ್​ಖಾನ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net