More

    “ಕೂಸಿಗೆ ಡೈಪರ್​ ಬದಲಿಸುವುದಕ್ಕೂ ಹೆಚ್ಚು ಬಾರಿ ಆಟಗಾರರನ್ನ ಬದಲಾಯಿಸ್ತಾರೆ”

    ದುಬೈ: ಐಪಿಎಲ್​ನ ಪಂಜಾಬ್​ ಕಿಂಗ್ಸ್​ ತಂಡದ ಮಾಜಿ ಕ್ಯಾಪ್ಟನ್​ ಮತ್ತು ಕೋಚ್​ ಆಗಿದ್ದ ವೀರೇಂದರ್ ಸೆಹವಾಗ್​ ಅವರು, ಪಂಜಾಬ್​ ತಂಡ ತನ್ನ ಆಟಗಾರರನ್ನು ಮತ್ತೆ ಮತ್ತೆ ಬದಲಿಸುವ ಅಭ್ಯಾಸವನ್ನು ತಿದ್ದುಕೊಳ್ಳಬೇಕು ಎಂದು ಹೇಳಿದ್ದಾರೆ. “ಪಂಜಾಬ್​ ಕಿಂಗ್ಸ್​ ತನ್ನ 11 ಆಟಗಾರರನ್ನು ಬದಲಿಸುವಷ್ಟು ಬಾರಿ ಕೂಸುಗಳು ಡೈಪರ್​ ಕೂಡ ಬದಲಾಯಿಸುವುದಿಲ್ಲ” ಎಂದು ಉದ್ಗರಿಸಿದ್ದಾರೆ.

    ಮಂಗಳವಾರ ದುಬೈನಲ್ಲಿ ಐಪಿಎಲ್​​ನ ಎರಡನೇ ಭಾಗದಲ್ಲಿ ​ರಾಜಸ್ತಾನ್​ ರಾಯಲ್ಸ್​ ವಿರುದ್ಧ ಪಂಜಾಬ್​ ಕಿಂಗ್ಸ್​ನ ಪಂದ್ಯ ನಡೆಯುವ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ್ದ ಸೆಹವಾಗ್,​ ಪಂಜಾಬ್​ ತಂಡ ತನ್ನ ಬೌಲಿಂಗ್​ ಅಟ್ಯಾಕನ್ನು ಸಶಕ್ತಗೊಳಿಸಬೇಕು ಎಂದು ಸಲಹೆ ನೀಡಿದ್ದರು. ಜೊತೆಗೇ, ಈ ತಂಡ ಮೊದಲ ಏಳು ಆಟಗಳಲ್ಲಿ ತನ್ನ ಬೌಲಿಂಗ್​ಅನ್ನು ಅನೇಕ ಬಾರಿ ಬದಲಾಯಿಸಿದೆ. ಅವರು ಯಾರನ್ನು ಆಡಿಸುತ್ತಾರೆ, ಹೇಗೆ ಆಡುತ್ತಾರೆ ಎಂಬುದು ಬಹಳ ಮಹತ್ವ ಹೊಂದಿದೆ. ತಮ್ಮ ಆಟಗಾರರನ್ನು ಆಗಾಗ್ಗೆ ಬದಲಾಯಿಸುತ್ತಿರುವುದರಿಂದಲೇ ಪಂಜಾಬ್ ಕಿಂಗ್ಸ್​ ತಂಡಕ್ಕೆ ಐಪಿಎಲ್​ನಲ್ಲಿ ನಿಯಮಿತವಾಗಿ ಪಂದ್ಯಗಳನ್ನು ಗೆಲ್ಲುವುದು ಕಷ್ಟವಾಗುತ್ತಿದೆ ಎಂದು ಸೆಹವಾಗ್​ ಹೇಳಿದ್ದರು.

    ಇದನ್ನೂ ಓದಿ: ಬಾಯ್​ಫ್ರೆಂಡ್​ ಜತೆ ಗೋವಾಕ್ಕೆ ಪ್ರವಾಸ ಹೋದ ನಟಿ ಈಶ್ವರಿ ದುರಂತ ಸಾವು! ಗೆಳೆಯನೂ ಬದುಕಲಿಲ್ಲ

    ಈ ನಡುವೆ, ಐಪಿಎಲ್​ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದ ಪಂಜಾಬ್​ ಕಿಂಗ್ಸ್​, 6ನೇ ಸ್ಥಾನದಲ್ಲಿದ್ದ ರಾಜಸ್ತಾನ್​ ರಾಯಲ್ಸ್​ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ 2 ರನ್​ಗಳಿಂದ ಸೋಲಪ್ಪಿದೆ. ಈ ಸೋಲಿನೊಂದಿಗೆ ಪಂಜಾಬ್ ತಂಡದ ಪ್ಲೇಆಫ್ ಹಾದಿ ಮತ್ತಷ್ಟು ಕಠಿಣಗೊಂಡಿದ್ದರೆ, ರಾಜಸ್ಥಾನ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. (ಏಜೆನ್ಸೀಸ್)

    ‘ಗಂಡಸಿನಂಥ ದೇಹದವಳು ತಾಪ್ಸೀನೇ’ ಎಂದ ಟ್ವೀಟ್​ಗೆ ನಟಿ ನೀಡಿದ ಉತ್ತರ ನೋಡಿ!

    ಕಮ್ಯಾಂಡೋ ವೇಷ ಧರಿಸಿ ಐಎಸ್​ಐಗೆ ಸೇನೆ ಮಾಹಿತಿ ಕಳಿಸ್ತಿದ್ದ! ಬೆಂಗಳೂರಲ್ಲಿ ಬಟ್ಟೆ ವ್ಯಾಪಾರ ಮಾಡ್ತಿದ್ದ!

    ನರಗಳ – ಮನಸ್ಸಿನ ನಿಯಂತ್ರಣ ಸಾಧಿಸಲು, ಈ ಯೋಗಾಸನ ಸಹಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts