More

    ‘ಗಂಡಸಿನಂಥ ದೇಹದವಳು ತಾಪ್ಸೀನೇ’ ಎಂದ ಟ್ವೀಟ್​ಗೆ ನಟಿ ನೀಡಿದ ಉತ್ತರ ನೋಡಿ!

    ಮುಂಬೈ: ಅನೇಕ ಆ್ಯಕ್ಷನ್​ ಸಿನಿಮಾಗಳಲ್ಲಿ ಅತ್ಯುತ್ತಮ ನಟನೆ ತೋರಿ ಜನಪ್ರಿಯತೆ ಗಳಿಸಿರುವ ನಟಿ, ತಾಪ್ಸೀ ಪನ್ನು. ಇತ್ತೀಚೆಗೆ ಬಾಲಿವುಡ್​ ಸುದ್ದಿ ಕೇಂದ್ರಿತ ಟ್ವಿಟರ್​ ಖಾತೆಯೊಂದು ಅವರು ಗಂಡಸಿನ ದೇಹ ಹೊಂದಿರುವರೆಂಬ ಕಾಮೆಂಟ್​ ಮಾಡಿತ್ತು. ಈ ಕಾಮೆಂಟನ್ನು ಸಕಾರಾತ್ಮಕವಾಗಿ ಸ್ವೀಕರಿಸಿರುವ ನಟಿಯು, ಧನ್ಯವಾದ ಹೇಳಿದ್ದಾರೆ. ಈ ರೀತಿಯ ಶ್ಲಾಘನೆಗಾಗಿ ನಾನು ಬಹಳ ಕಷ್ಟಪಟ್ಟಿದ್ದೇನೆ ಎಂದಿದ್ದಾರೆ!

    ‘ರಶ್ಮಿ ರಾಕೆಟ್’​ ಎಂಬ ಕ್ರೀಡಾ ಪ್ರಧಾನ ಚಿತ್ರದಲ್ಲಿ ಓಟಗಾರ್ತಿಯ ಪಾತ್ರ ನಿರ್ವಹಿಸುತ್ತಿರುವ ತಾಪ್ಸೀ ಅವರನ್ನು ಹಿಂದಿನಿಂದ ತೋರಿಸುವ ಚಿತ್ರವೊಂದು ಇತ್ತೀಚೆಗೆ ಹೊರಬಿದ್ದಿತ್ತು. ಈ ಬಗ್ಗೆ ಬಾಲಿವುಡ್​ ಕಿ ನ್ಯೂಸ್​ ಎಂಬ ಟ್ವಿಟರ್​ ಖಾತೆಯಲ್ಲಿ ‘ಈ ಗಂಡಸಿನ ದೇಹ ಹೊಂದಿರುವವಳು ತಾಪ್ಸೀನೇ ಆಗೋಕೆ ಸಾಧ್ಯ’ ಎಂದು ಟ್ವೀಟ್​​ ಮಾಡಿತ್ತು.

    ಇದನ್ನೂ ಓದಿ: ‘ಟೈಗರ್​ 3’ನಲ್ಲಿ ನಟಿಸ್ತಿದ್ದೀನಿ ಅಂತ ಯಾರು ಹೇಳಿದ್ದು? ಇಮ್ರಾನ್​ ಪ್ರಶ್ನೆ

    ಇದಕ್ಕೆ ಉತ್ತರಿಸಿರುವ ತಾಪ್ಸೀ, “ನಾನು ಹೇಳೋದಿಷ್ಟೇ… ಈ ಲೈನನ್ನು ನೆನಪಿಟ್ಟುಕೊಳ್ಳಿ ಮತ್ತು ಸೆಪ್ಟೆಂಬರ್​ 23ಕ್ಕಾಗಿ ಕಾಯಿರಿ. ಹಾಗೂ ನಿಮಗೆ ಮುಂಗಡವಾಗಿ ಥ್ಯಾಂಕ್ಯೂ … ಏಕೆಂದರೆ ನಾನು ಈ ಹೊಗಳಿಕೆಗಾಗಿ ತುಂಬಾ ಕಷ್ಟ ಪಟ್ಟಿದ್ದೇನೆ” ಎಂದು ಟ್ವೀಟ್​ ಮಾಡಿದ್ದಾರೆ.

    ಆಕರ್ಷ್​ ಖುರಾನಾ ನಿರ್ದೇಶಿಸಿರುವ ರಶ್ಮಿ ರಾಕೆಟ್​ ಚಿತ್ರಕ್ಕಾಗಿ ತೀವ್ರ ತೆರನ ಫಿಟ್​ನೆಸ್​ ರುಟೀನ್ ಕೈಗೊಂಡಿದ್ದ ತಮ್ಮ ಫೋಟೋಗಳನ್ನು ಈ ಮುನ್ನ ತಾಪ್ಸೀ ಶೇರ್ ಮಾಡಿದ್ದರು. ಆ ಚಿತ್ರ ಅಕ್ಟೋಬರ್​ 15ಕ್ಕೆ ಜೀ5ನಲ್ಲಿ ತೆರೆಕಾಣಲಿದೆ. ಹೀಗಾಗಿ ಸೆ.23ಕ್ಕೆ ಏನು ವಿಶೇಷ ಎಂದು ಸಿನಿ ಆಸಕ್ತರು ಪ್ರಶ್ನಿಸುತ್ತಿದ್ದಾರೆ. (ಏಜೆನ್ಸೀಸ್)

    ‘ಪ್ರತಿಯೊಂದು ರೂಪಾಯಿ ಸರತಿಯಲ್ಲಿ ಕಾಯುತ್ತಿದೆ!’ ಮೌನ ಮುರಿದ ನಟ ಸೋನು ಸೂದ್​, ಐಟಿ ಸಮೀಕ್ಷೆ ಬಗ್ಗೆ ಹೇಳಿದ್ದೇನು?

    ಟೀಚರ್​​ಗೆ ಗಿಫ್ಟ್ ತಂದಿದೀನಿ ಎನ್ನುತ್ತಾ ಮಚ್ಚಿನಿಂದ ಹಲ್ಲೆ ಮಾಡಿದ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts