VIDEO| ಗುರುದ್ವಾರದಲ್ಲಿ ಹಲ್ಲೆ ಯತ್ನ; ವ್ಯಕ್ತಿ ವಶಕ್ಕೆ

Sacrilage
Published on

ಅಮೃತಸರ: ಗುರುದ್ವಾರ ಕೊತ್ವಾಲಿ ಸಾಹಿಬ್ ಗರ್ಭಗುಡಿಗೆ ನುಗ್ಗಿ ವ್ಯಕ್ತಿ ಒಬ್ಬ ಗುರುಗುಳ ಮೇಲೆ ದಾಳಿ ಮಾಡಿ 'ಗುರು ಗ್ರಂಥ್​ ಸಾಹಿಬ್​' ಗ್ರಂಥವನ್ನು ಅಪವಿತ್ರಗೊಳಿಸಿರುವ ಘಟನೆ ಪಂಜಾಬ್​ನ ಮೊರಿಂಡಾದಲ್ಲಿ ನಡೆದಿದೆ.

ಮೊರಿಂಡಾದ ಗುರುದ್ವಾರ ಕೊತ್ವಾಲಿ ಸಾಹಿಬ್​ನಲ್ಲಿ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಸಾಕಷ್ಟು ಖಂಡನೆ ವ್ಯಕ್ತವಾಗಿದೆ.

ಹಲ್ಲೆ

ವಿಡಿಯೋದಲ್ಲಿ ಕಂಡು ಬರುವ ಹಾಗೆ ವ್ಯಕ್ತಿಯೋರ್ವ ದಿಢೀರನೇ ಗುರದ್ವಾರ ಕೊತ್ವಾಲಿ ಸಾಹಿಬ್ ಗರ್ಭಗುಡಿ ಒಳಗೆ ಪ್ರವೇಶಿಸಿ ಅಲ್ಲಿದ್ದವರ ಮೇಲೆ ಹಲ್ಲೆ ನಡೆಸುತ್ತಾನೆ. ಕೂಡಲೇ ಸ್ಥಳೀಯರು ಆತನನ್ನು ಹಿಡಿದು ಆಡಳಿತ ಮಂಡಳಿಗೆ ಒಪ್ಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನವನೀತ್​ ಸಿಂಗ್​ ಮಹಲ್​ ವ್ಯಕ್ತಿ ಓರ್ವ ದಿಢೀರನೆ ಗುರುದ್ವಾರಕ್ಕೆ ನುಗ್ಗಿ ಅಲ್ಲಿದ್ದ ಗ್ರಂಥಿಸ್​ ,ಮೇಲೆ ಹಲ್ಲೆ ನಡೆಸಿ ಗುರು ಗ್ರಂಥ್​ ಸಾಹಿಬ್​ನನ್ನು ಅಪವಿತ್ರಗೊಳಿಸಿದ್ದಾನೆ. ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದ್ದು ಇನ್ನಷ್ಟು ವಿವರವನ್ನು ಶೀಘ್ರವೇ ತಿಳಿಸಲಾಗುವುದು ಎಂದಿದ್ಧಾರೆ.

ಖಂಡನೆ

ಇನ್ನು ಘಟನೆ ಕುರಿತು ಸಾಕಷ್ಟು ಖಂಡನೆ ವ್ಯಕ್ತವಾಗಿದ್ದು ದೆಹಲಿಯ ಬಿಜೆಪಿ ಶಾಸಕ ಮಂಜಿಂದರ್​ ಶಿಂಗ್​ ಸಿರ್ಸಾ ಟ್ವೀಟ್​ ಮಾಡಿ ಎಎಪಿ ಸರ್ಕಾರದ ಸಡಿಲ ಧೋರಣೆಗಳಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ. ಅಪರಾಧಿಗೆ ಕಠಿಣ ಕಾನೂನು ಶಿಕ್ಷೆ ನೀಡುವಂತೆ ಒತ್ತಾಯಿಸಿದ್ಧಾರೆ.

ಇನ್ನು ಈ ಕುರಿತು ಟ್ವೀಟ್​​ ಮಾಡಿರುವ ಪಂಜಾಬ್​ನ ಮಾಜಿ ಸಿಎಂ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಇದು ಅತ್ಯಂತ ಖಂಡನೀಯ ಕೃತ್ಯವಾಗಿದ್ದು ಅಪರಾಧಿಯನ್ನು ಕಠಿಣ ಕಾನೂನು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net