ಬೀದಿಯಲ್ಲಿ ಬೆತ್ತಲಾಗಿ ಓಡಾಡಿದ ವ್ಯಕ್ತಿ ಅರೆಸ್ಟ್; ಈತ ಹೇಳಿದ್ದು ಕೇಳಿದ್ರೆ ಶಾಕ್​ ಆಗ್ತೀರಾ!

walk
Published on

ವಾಷಿಂಗ್ಟನ್: ಬಾಲಿವುಡ್‌ನ ಪಿಕೆ ಸಿನಿಮಾದಲ್ಲಿ ನಟ ಅರೆಬೆತ್ತಲಾಗಿ ಓಡಾಡುತ್ತಿರುತ್ತಾನೆ. ಹೀಗೆ ಅಮೆರಿಕದಲ್ಲಿ ವ್ಯಕ್ತಿಯೊಬ್ಬ ಬೀದಿಯಲ್ಲಿ ಬೆತ್ತಲಾಗಿ ಸಂಚರಿಸಿದ್ದಕ್ಕೆ ಆತನನ್ನು ಪೊಲೀರು ಬಂಧಿಸಿದ್ದಾರೆ.

ಫ್ಲೋರಿಡಾದ ಪಾಮ್ ಬೀಚ್‌ನಲ್ಲಿ 44 ವರ್ಷದ ವ್ಯಕ್ತಿಯೊಬ್ಬ ಬೆತ್ತಲಾಗಿ ನಡೆದುಕೊಂಡು ಹೋಗುತ್ತಿದ್ದುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಬಳಿಕ ಆತನನ್ನು ವಿಚಾರಣೆ ಮಾಡಿದಾಗ ಈತನ ಮಾತು ಹೇಳಿ ಪೊಲೀಸರು ಶಾಕ್​ ಆಗಿದ್ದಾರೆ. ತಾನು ಬೇರೊಂದು ಗ್ರಹದಿಂದ ಬಂದಿದ್ದೇನೆ ಎಂದಿದ್ದಾನೆ. ಪೊಲೀಸರು ಬಂಧಿಸಿದಾಗ ಆತ ನಾನು ಬಟ್ಟೆಗಳನ್ನು ಎಲ್ಲಿ ಇಟ್ಟಿದ್ದೇನೋ ಗೊತ್ತಿಲ್ಲ. ವ್ಯಕ್ತಿ ನಾನು ಭೂಮಿಯವನೇ ಅಲ್ಲ, ಅನ್ಯಗ್ರಹದಿಂದ ಬಂದಿದ್ದೇನೆ. ಕೆಲ ದಿನಗಳಿಂದ ಪಾಮ್ ಬೀಚ್‌ನಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದ್ದಾನೆ.

ಆತ ತನ್ನ ಹೆಸರು ಅಥವಾ ಯಾವುದೇ ಗುರುತುಗಳನ್ನು ನೀಡಲು ನಿರಾಕರಿಸಿದ್ದಾನೆ. ಇದಾದ ಬಳಿಕ ಪೊಲೀಸರು ಆತನ ಬಗ್ಗೆ ಪತ್ತೆ ಹಚ್ಚಿ, ಹೆಸರನ್ನು ಜೇಸನ್ ಸ್ಮಿತ್ ಎಂದು ಗುರುತಿಸಿದ್ದಾರೆ. ಇದೀಗ ಪೊಲೀಸರು ಅಸಭ್ಯವಾಗಿ ವರ್ತಿಸಿರುವುದಕ್ಕೆ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net