ಅರಣ್ಯ ಅಧಿಕಾರಿಗಳಿಗೆ ಕಳ್ಳಬೇಟೆ ಮಾಹಿತಿ ನೀಡುತ್ತಿದ್ದವನೇ ಜಿಂಕೆ ಕೊಂದ!

jinke
Published on

ಕೊಳ್ಳೇಗಾಲ: ತನ್ನ ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ, ವನ್ಯಜೀವಿ ಬೇಟೆ ನಡೆದರೆ ಅರಣ್ಯ ಇಲಾಖೆಗೆ ತಿಳಿಸುತ್ತಿದ್ದ ಮಾಹಿತಿದಾರನೇ ಜಿಂಕೆ ಬೇಟೆಯಾಡಿ ಚರ್ಮ ಸುಲಿಯುವ ವೇಳೆ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಅರೇಪಾಳ್ಯ ಗ್ರಾಮದ ಬಿಆರ್​ಟಿ ಅರಣ್ಯ ವನ್ಯಜೀವಿ ವಿಭಾಗದಲ್ಲಿ ಜಿಂಕೆ ಹತ್ಯೆ ಮಾಡಿದ್ದ ನಾಗೇಗೌಡ ಬಂಧಿತ ಆರೋಪಿ.

ಅರೇಪಾಳ್ಯದ ಕಾಡಂಚಿನ ತೋಟದ ಮನೆಯಲ್ಲಿ ವಾಸ ಮಾಡುತ್ತಿದ್ದ‌ ನಾಗೇಗೌಡನ ಜಮೀನಿನ ಬಳಿ ಆನೆಗಳು ಗ್ರಾಮದತ್ತ ಬರುವುದನ್ನು ತಡೆಯಲು ನಿರ್ಮಿಸಿದ್ದ ಕಂದಕಕ್ಕೆ ಜಿಂಕೆ ಬಿದ್ದಿತ್ತು. ಇದನ್ನು ಕಂಡ ನಾಗೇಗೌಡ ಜಿಂಕೆಯನ್ನು ಸಾಯಿಸಿ, ಚರ್ಮ ಸುಲಿಯಲು ಮುಂದಾಗಿದ್ದ. ವಿಷಯ ತಿಳಿದು ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಆರೋಪಿಯನ್ನು ಬಂಧಿಸಿ, ಜಿಂಕೆ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net