ಮನೆ ಮೇಲೆ ಪಾಕ್ ಧ್ವಜ ಹಾರಿಸಿ ಬಳಿಕ ಮಗ ಗೊತ್ತಿಲ್ದೇ ಹಾರಿಸಿರಬೇಕು ಎಂದ!

arrest
Published on

ದೇವಸ್​: ಮಧ್ಯಪ್ರದೇಶದ ದೇವಸ್​ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಮನೆಯ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ವಿಡಿಯೋ ವೈರಲ್ ಆಗಿತ್ತು. ವಿಡಿಯೋದ ಜಾಡು ಹಿಡಿದ ಪೊಲೀಸರು ಮನೆಯ ಮಾಲೀಕನನ್ನು ಬಂಧಿಸಿದ್ದಾರೆ.

ಬಂಧಿತನನ್ನು ದೇವಸ್ ಜಿಲ್ಲೆಯ ಶಿಪ್ರಾ ಗ್ರಾಮದ ಫಾರೂಖ್ ಖಾನ್ ಎಂದು ಗುರುತಿಸಲಾಗಿದೆ. ಪಾಕ್ ಧ್ವಜ ಹಾರಿಸಿದ ವಿಡಿಯೋ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಫಾರೂಖ್​ ಖಾನ್​ನನ್ನು ಬಂಧಿಸಿದ ವೇಳೆ ಆತ ಪೋಲಿಸರ ಬಳಿ ಅಮಾಯಕನಂತೆ ವರ್ತಿಸಿದ್ದ. ಮನೆಯ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ್ದು ತಾನಲ್ಲ ಎಂದು ಅಲವತ್ತುಕೊಂಡಿದ್ದಾನೆ. ಅಲ್ಲದೆ, ತನ್ನ 12 ವರ್ಷದ ಮಗ ಗೊತ್ತಿಲ್ಲದೇ ಹಾರಿಸಿರಬೇಕು ಎಂದೆಲ್ಲ ಸಮಜಾಯಿಷಿ ನೀಡಲು ನೋಡಿದ್ದ!

ಖಾನ್ ಮನೆಯಿಂದ ಪಾಕಿಸ್ತಾನದ ಧ್ವಜವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 153 ಪ್ರಕಾರ ವೈಷಮ್ಯ ಹರಡಲು ಪ್ರಯತ್ನಿಸಿದ ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net