ವಿಳಾಸ ಕೇಳುವ ನೆಪದಲ್ಲಿ ಕಾರು ನಿಲ್ಲಿಸಿದ: ಮಹಿಳೆ ಹತ್ತಿರ ಬರ್ತಿದ್ದಂತೆ ನಡೆಯಿತು ಅಸಹ್ಯ!

Woman
Published on

ಮುಂಬೈ: ಮಹಿಳೆಯ ಮುಂದೆ ಅಶ್ಲೀಲತೆ ಪ್ರದರ್ಶಿಸಿದ ವ್ಯಕ್ತಿಯೊಬ್ಬನನ್ನು ಮುಂಬೈನ ಘಾಟ್ಕೋಪರ್ ಉಪನಗರದ ಪೊಲೀಸರ ಶನಿವಾರ ಬಂಧಿಸಿದ್ದಾರೆ. ​

ಪೂರ್ವ ಘಾಟ್ಕೋಪರ್ ನಗರದ ರಾಜಾವಾಡಿ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ಘಟನೆ ಸಂಭವಿಸಿತು. ಆರೋಪಿಯನ್ನು ಬಿಥು ಪರ್ಚಾ ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸಂತ್ರಸ್ತ ಮಹಿಳೆಯ ಬಳಿ ವಿಳಾಸ ಕೇಳುವ ನೆಪದಲ್ಲಿ ಆರೋಪಿ ಕಾರು ನಿಲ್ಲಿಸಿದ್ದಾನೆ.

ಮಹಿಳೆ ಕಾರಿನ ಬಳಿ ಬರುತ್ತಿದ್ದಂತೆ ಪ್ಯಾಂಟಿನ್​ ಜಿಪ್​ ಓಪನ್​ ಮಾಡಿ ಆಕೆಯ ಮುಂದೆ ಅಶ್ಲೀಲತೆ ಪ್ರದರ್ಶಿಸಿದ್ದಾನೆ. ಇದರಿಂದ ಗಾಬರಿಗೊಂಡ ಮಹಿಳೆ ತಕ್ಷಣ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ಇದರಿಂದ ಹೆದರಿಕೆ ಕಾರು ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.

ಇದಾದ ಬಳಿ ಮಹಿಳೆ ತಿಲಕ್​ ನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್​ 354 (ಎ) (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net