More

    ತಂಗಿ ಸಾವಿಗೆ ಬಾವನೇ ಕಾರಣವೆಂದು 30ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಂದ ಬಾಮೈದ

    ಬೆಂಗಳೂರು: ಹಾಡಹಗಲಲ್ಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯವು ಜನರನ್ನು ಆತಂಕಕ್ಕೆ ದೂಡಿದೆ.

    ತಂಗಿಯ ಸಾವಿಗೆ ಬಾವನೇ ಕಾರಣವೆಂದು ಬಾಮೈದನೊಬ್ಬ ತನ್ನ ಭಾವನನ್ನು 30ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿರಿದು ಬರ್ಬರವಾಗಿ ಕೊಲೆಗೈದಿದ್ದಾನೆ. ಸೆ.21 ರಂದು ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿದ್ದು, ಅದರ ಸಿಸಿಟಿವಿ ದೃಶ್ಯಾವಳಿ ಇದೀಗ ಬಹಿರಂಗವಾಗಿದೆ. ರಾಜೇಶ್ ಎಂಬಾತನನ್ನು ಜಾನ್ ಪಾಲ್ ಹಾಗೂ ದಿನೇಶ್ ಕೊಲೆ ಮಾಡಿದ್ದರು. ದಯವಿಟ್ಟು ಬಿಟ್ಟು ಬಿಡಿ ಎಂದು ಕಿರುಚಾಡಿದರೂ ಮನಸೋ ಇಚ್ಚೆ ಚಾಕು ಇರಿದು ಕೊಲೆ ಮಾಡಲಾಗಿತ್ತು.

    ಇದನ್ನೂ ಓದಿ: ಮಾರಕ ಇಂಜೆಕ್ಷನ್​ ನೀಡಿ ಮಾಲೀಕನಿಂದ ನಾಯಿಯ ಜೀವಂತ ಸಮಾಧಿ: ನಡೆಯಿತು ಪವಾಡ..!

    ಆರೋಪಿ ಜಾನ್ ಪೌಲ್ ತಂಗಿ ಜಾಸ್ಮೀನ್​ಳನ್ನು ರಾಜೇಶ್ 7 ವರ್ಷಗಳ ಹಿಂದೆ​ ಮದುವೆಯಾಗಿದ್ದ. ಆದರೆ, ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಜಾಸ್ಮೀನ್​ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆತ್ಮಹತ್ಯೆಗೂ ಮುನ್ನ ಅಣ್ಣನಿಗೆ ಕರೆ ಮಾಡಿ ಗಂಡನ‌ ಕಿರುಕುಳದ ಬಗ್ಗೆ ಹೇಳಿದ್ದಳು. ಹೀಗಾಗಿ ಬಾವನನ್ನು ಕೊಲೆ ಮಾಡಲೇಬೇಕೆಂದು ಜಾನ್​ ಪಾಲ್​ ತೀರ್ಮಾನಿಸಿದ್ದ.

    ಅದರಂತೆಯೇ ಸೆ. 21ರಂದು ಹಾಡಹಗಲೇ ಸ್ನೇಹಿತ ದಿನೇಶ್​ ಜತೆ ಸೇರಿ ರಾಜೇಶ್​ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಇದೀಗ ಆರೋಪಿಗಳಿಬ್ಬರನ್ನು ಕಾಡಗೋಡಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ. (ದಿಗ್ವಿಜಯ ನ್ಯೂಸ್​)

    ಮಹೀಂದ್ರಾ ತದ್ರೂಪಿ ಪುಟಾಣಿ ವಾಹನ​ ಉಚಿತವಾಗಿ ಪಡೆಯಲು ಇಲ್ಲಿದೆ ಆಫರ್​, ಕೆಲವೇ ಗಂಟೆ ಬಾಕಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts