More

  ಮಾಜಿ ಶಾಸಕ ಡಾ.ಬಿ.ಜಿ.ಪಾಟೀಲ ನಿಧನ

  ರಾಣಿಬೆನ್ನೂರ: ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ.ಬಸನಗೌಡ ಗುರುನಗೌಡ ಪಾಟೀಲ (90) ಶನಿವಾರ ಬೆಂಗಳೂರಿನಲ್ಲಿ ನಿಧನರಾದರು.
  ಡಾ.ಬಿ.ಜಿ.ಪಾಟೀಲ ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರದಿಂದ 1983ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. 1985ರಲ್ಲಿ ರಾಣಿಬೆನ್ನೂರ ತಾಲೂಕಿನ ಹಲಗೇರಿ ಕ್ಷೇತ್ರದಿಂದ ಜಿಲ್ಲಾ ಪಂಚಾಯತ್‌ಗೆ ಆಯ್ಕೆಯಾಗಿ ಅವಿಭಜಿತ ಧಾರವಾಡ ಜಿಲ್ಲಾ ಪಂಚಾಯತ್‌ನ ಅಧ್ಯಕ್ಷರಾಗಿ ಐದು ವರ್ಷ ಆಡಳಿತ ನಡೆಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು.
  ವೃತ್ತಿಯಲ್ಲಿ ವೈದ್ಯರಾಗಿದ್ದ ಪಾಟೀಲರು ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಜನಾನುರಾಗಿಯಾಗಿದ್ದರು. ಇವರಿಗೆ ಪುತ್ರ, ಮೂವರು ಪುತ್ರಿಯರು ಇದ್ದಾರೆ.

  See also  ಮೇ 10 ರಿಂದ ಸಿದ್ಧಾರೂಢ ಮಹಾತ್ಮೆ ಪ್ರವಚನ, ಸಾಯಿಬಾಬಾ ಭಾವಚಿತ್ರದ ಮೆರವಣಿಗೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts