ಎಟಿಎಂಗಳಲ್ಲಿ ಗ್ರಾಹಕರನ್ನು ವಂಚಿಸುತ್ತಿದ್ದವನ ಬಂಧನ

Published on

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ

ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡುವ ಸಂದರ್ಭದಲ್ಲಿ ಗ್ರಾಹಕರನ್ನು ವಂಚಿಸುತ್ತಿದ್ದ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಬೊಮ್ಮನಹಳ್ಳಿಯ ಅಪಾರ್ಟ್​ಮೆಂಟ್​ವೊಂದರ ಸೆಕ್ಯೂರಿಟಿ ಗಾರ್ಡ್​ ನಿಯಾಜ್​ ಉದ್ದೀನ್​ (20) ಆರೋಪಿ. ಈತ ಎಟಿಎಂಗಳಲ್ಲಿ ಸಕಾಲಕ್ಕೆ ಹಣ ಬಾರದಂತೆ ಸಾಧನ ಅಳವಡಿಸುತ್ತಿದ್ದ. ಗ್ರಾಹಕರು ಹೊರ ಹೋಗುತ್ತಿದ್ದಂತೆ ದುಡ್ಡು ಪಡೆದುಕೊಂಡು ಪರಾರಿಯಾಗುತ್ತಿದ್ದ. ಈಗ

ಆರೋಪಿಯನ್ನು ಬಂಧಿಸಿ, ಹಣ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ಹಿನ್ನೆಲೆ: ಚಿಕ್ಕಬಳ್ಳಾಪುರದ ಕೆನರಾ ಬ್ಯಾಂಕ್​ ಎಟಿಎಂ ಕೇಂದ್ರದಲ್ಲಿ ಏಪ್ರಿಲ್​ 11 ರಂದು ಹಣ ಡ್ರಾ ಮಾಡುವ ಯಂತ್ರಕ್ಕೆ ಸಾಧನ ಅಳವಡಿಸಿದ್ದು, ಗ್ರಾಹಕರನ್ನು ವಂಚಿಸಿ 2 ಲಕ್ಷ ರೂ. ಕಳವು ಮಾಡಿರುವ ಬಗ್ಗೆ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಬಿ.ಸುಧೀರ್​ ಎಸ್​.ರಾವ್​ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಶಾಲ್​ ಚೌಕ್ಸೆ ಸೂಚನೆ ಮೇರೆಗೆ ಜಿಲ್ಲಾ ಅಪರ ಪೊಲೀಸ್​ ವರಿಷ್ಠಾಧಿಕಾರಿ ಬಿ.ಜಗನ್ನಾಥ್​ ರಾಯ್​, ಡಿವೈಎಸ್ಪಿ ಶಿವಕುಮಾರ್​ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಮಂಜುನಾಥ್​, ಪಿಎಸ್​ಐ ಎಸ್​.ಎಂ.ಅಮರ್​, ರತ್ನಬಾಯಿ, ಸಿಬ್ಬಂದಿ ಲೋಕೇಶ್​, ಅಯಬ್​ ಮುಲ್ಲಾ, ಲಕ್ಷ$್ಮಣ್​, ರವೀಂದ್ರ,

ಮುನಿಕೃಷ್ಣರನ್ನೊಳಗೊಂಡ ತಂಡವನ್ನು ತನಿಖೆಗೆ ರಚಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net