ಜಮೀನು ಕಬಳಿಸಲು ದುಷ್ಕರ್ಮಿ ರೂಪಿಸಿದ ಸಂಚಿಗೆ ಒಂದೇ ಕುಟುಂಬದ 6 ಮಂದಿ ಬಲಿ!

ವಿಜಯವಾಣಿ - 2023-12-19T084042.533
Published on

ತೆಲಂಗಾಣ: 20 ವರ್ಷದ ಕಿಡಿಗೇಡಿ ಕುಟುಂಬವೊಂದರ ಮಾಲೀಕತ್ವದ ಜಮೀನನ್ನು ಕಬಳಿಸುವ ಸಲುವಾಗಿ ಒಂದೇ ಕುಟುಂಬದ ಆರು ಜನರನ್ನು ಅಮಾನುಷವಾಗಿ ಹತ್ಯೆಗೈದ ಘಟನೆ ತೆಲಂಗಾಣದ ಮಕ್ಲೂರ್‌ನಲ್ಲಿ ವರದಿಯಾಗಿದೆ. ಸ್ಥಳ ಪರಿಶೀಲಿಸಿದ ಪೊಲೀಸರು ಕೇವಲ ನಾಲ್ಕು ಅಪರಿಚಿತ ಶವಗಳನ್ನು ಮಾತ್ರ ಪತ್ತೆಹಚ್ಚಲು ಸಾಧ್ಯವಾಗಿದ್ದು, ಪ್ರಾಥಮಿಕ ತನಿಖೆಯು ಎಲ್ಲಾ ಪ್ರಕರಣಗಳಲ್ಲಿ ಒಬ್ಬ ವ್ಯಕ್ತಿ ಭಾಗಿಯಾಗಿದ್ದಾನೆ ಎಂದು ಸೂಚಿಸಿದೆ ಎಂದು ಹೇಳಿದ್ದಾರೆ.

ದುಷ್ಕರ್ಮಿಯ ಕೃತ್ಯಕ್ಕೆ ಬಲಿಯಾದವರು ಮಕ್ಲೂರು ಗ್ರಾಮದ ನಿವಾಸಿಗಳಾಗಿದ್ದು, ಮಂಗಳಿ ಪ್ರಸಾದ್ ಮತ್ತು ಅವರ ಪತ್ನಿ, ಇಬ್ಬರು ಮಕ್ಕಳು ಮತ್ತು ಇಬ್ಬರು ಸಹೋದರಿಯರು ಎಂದು ಹೇಳಲಾಗಿದೆ. ಕುಟುಂಬವು ಮಕ್ಲೂರನ್ನು ತೊರೆದು ಕಾಮರೆಡ್ಡಿ ಜಿಲ್ಲೆಯ ಮಚರೆಡ್ಡಿ ಗ್ರಾಮದಲ್ಲಿ ನೆಲೆಸಿತ್ತು. ಮೂಲಗಳ ಪ್ರಕಾರ, ಕುಟುಂಬವು ಮಾಚರೆಡ್ಡಿಯಲ್ಲಿ ವಾಸವಾಗಿದ್ದರೆ, ಮಕ್ಲೂರಿನಲ್ಲಿರುವ ಅವರ ಮನೆಯನ್ನು ಮಂಗಳಿ ಪ್ರಸಾದ್ ಅವರ ಸ್ನೇಹಿತ ಗೊಲ್ಲ ಪ್ರಶಾಂತ್ ನಿರ್ವಹಿಸುತ್ತಿದ್ದರು.

ಕೊಲೆಯಾದವರೆಲ್ಲರೂ ಒಂದೇ ಕುಟುಂಬದವರೇ ಆಗಿರುವುದರಿಂದ ಎಲ್ಲಿಯೂ ನಾಪತ್ತೆ ಪ್ರಕರಣ ದಾಖಲಾಗಿಲ್ಲ. ನಾಲ್ಕು ಅಪರಿಚಿತ ಶವಗಳು ಪತ್ತೆಯಾಗಿದ್ದು, ನಾಲ್ಕು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಒಬ್ಬ ವ್ಯಕ್ತಿ ಈ ಎಲ್ಲ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಸೂಚಿಸಿರುವುದರಿಂದ ಪೊಲೀಸರು ಪ್ರಕರಣಗಳನ್ನು ಲಿಂಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಮರೆಡ್ಡಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net