More

    ಸರಣಿ ಜಯಿಸುವ ವಿಶ್ವಾಸದಲ್ಲಿ ಯುವ ಭಾರತ : ಇಂದು ದಕ್ಷಿಣ ಆಫ್ರಿಕಾ ಎದುರು ಎರಡನೇ ಏಕದಿನ ಪಂದ್ಯ

    ಗೆಬರ್ಹ: ಆರಂಭಿಕ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಹರಿಣಗಳ ನಾಡಿನಲ್ಲಿ ಶುಭಾರಂಭ ಕಂಡಿರುವ ಟೀಮ್ ಇಂಡಿಯಾ ಇದೀಗ ಸರಣಿ ವಶಪಡಿಸಿಕೊಳ್ಳಲು ಸಜ್ಜಾಗಿದೆ. ಸೇಂಟ್ ಜಾರ್ಜ್ ಕ್ರೀಡಾಂಗಣದಲ್ಲಿ ಮಂಗಳವಾರ ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ಕನ್ನಡಿಗ ಕೆಎಲ್ ರಾಹುಲ್ ಪಡೆ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. ಅತ್ತ ದಕ್ಷಿಣ ಆಫ್ರಿಕಾ ತಂಡಕ್ಕೆ ತವರಿನಲ್ಲಿ ಸರಣಿ ಸೋಲಿನ ಮುಖಭಂಗದಿಂದ ಪಾರಾಗಲು ಗೆಲ್ಲಲೇಬೇಕಾದ ಒತ್ತಡ ಎದುರಾಗಿದೆ.

    ಭವಿಷ್ಯದ ತಾರೆಯರ ಸರಣಿ ಎಂದೇ ಬಿಂಬಿತವಾಗಿದ್ದು, ಮೊದಲ ಪಂದ್ಯದಲ್ಲಿ ಅರ್ಷದೀಪ್ ಸಿಂಗ್, ಆವೇಶ್ ಖಾನ್ ಜೋಡಿ ಹರಿಣಗಳಿಗೆ ಕಡಿವಾಣ ಹೇರುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಆತಿಥೇಯ ದಕ್ಷಿಣ ಆಫ್ರಿಕಾದ ಅನನುಭವಿ ಬೌಲರ್‌ಗಳ ಸುಲಭ ಗೆಲುವು ದಾಖಲಿಸಿದ್ದ ಭಾರತದ ಮಧ್ಯಕ್ರಮಾಂಕದ ಬ್ಯಾಟಿಂಗ್‌ಗಳಿಗೆ ಸತ್ವಪರೀಕ್ಷೆ ಎದುರಾಗಿಲ್ಲ. ಆಫ್ರಿಕಾ ತಂಡ ಸಹ ಹಲವು ಪ್ರಮುಖ ಆಟಗಾರರನ್ನು ಏಕದಿನ ಸರಣಿಯಿಂದ ಹೊರಗಿಟ್ಟಿದ್ದು, ಯುವ ಆಟಗಾರರಿಗೆ ಅವಕಾಶ ಕಲ್ಪಿಸಿದೆ.

    ಸರಣಿಯ ಮೊದಲ ಪಂದ್ಯಕ್ಕೆ ಮಾತ್ರ ಲಭ್ಯವಾಗಿದ್ದ ಶ್ರೇಯಸ್ ಅಯ್ಯರ್ ಮುಂಬರುವ ಟೆಸ್ಟ್ ಸರಣಿಗೆ ಪೂರ್ವ ಸಿಧ್ಧತೆಯಾಗಿ ಅಂತಿಮ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇವರ ಬದಲಿಗೆ ಟಿ20 ತಂಡದ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಯಶಸ್ಸು ಕಂಡಿರುವ ರಿಂಕು ಸಿಂಗ್ ಅಥವಾ ಮಧ್ಯಪ್ರದೇಶ ರಜತ್ ಪಾಟೀದಾರ್ ಏಕದಿನಕ್ಕೆ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ಇನ್ನು ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ್ದ ಸಾಯಿ ಸುದರ್ಶನ್ ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಂಜು ಸ್ಯಾಮ್ಸನ್ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ.

    ಆರಂಭ: ಸಂಜೆ 4.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ ಹಾಟ್ ಸ್ಟಾರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts