ಎಂ.ಆರ್.ಮಮತ ನಿಧನ

mamata
Published on

ಬೆಂಗಳೂರು:
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ
ಎಂ.ಆರ್.ಮಮತ(47) ನೆಲಮಂಗಲ ಬಳಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪತ್ರಕರ್ತೆಯಾಗಿದ್ದ ಅವರು ವಾರ್ತಾ ಇಲಾಖೆಗೆ ಸೇರಿದ ಮೇಲೆ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದರು. ಸದ್ಯ ತುಮಕೂರು ಜಿಲ್ಲಾ ವಾರ್ತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಹಿರಿಯ ಪತ್ರಕರ್ತ ಎಚ್.ಆರ್.ರವೀಶ್ ಹಾಗೂ ಅವರ ಮಗ ಪ್ರಜ್ವಲ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮಮತ ಅವರ ಅಂತ್ಯಕ್ರಿಯೆ ತುಮಕೂರು ತಾಲ್ಲೂಕು ಹಾಲನೂರು ಗ್ರಾಮದ ಅವರ ತೋಟದಲ್ಲಿ ಶನಿವಾರ ಮಧ್ಯಾಹ್ನ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಸಂತಾಪ:
ಹಿರಿಯ ವಾರ್ತಾಧಿಕಾರಿ ಮಮತಾ ಅವರ ನಿಧನಕ್ಕೆ ವಾರ್ತಾ ಇಲಾಖೆ ಅಧಿಕಾರಿಗಳ ಬಳಗ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲುಜೆ) ತೀವ್ರ ಸಂತಾಪ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net