ವೀಲ್​ ಚೇರ್​ನಲ್ಲಿ ಕುಳಿತು ಪಾದಯಾತ್ರೆ ಮಾಡಿದ ದೀದಿ!

ಮಅಮತಹಅ
Published on

ಕೋಲ್ಕತ: ಚುನಾವಣಾ ಪ್ರಚಾರದ ವೇಳೆ ಕಾಲು ಮುರಿದುಕೊಂಡು, ವೀಲ್​ಚೇರ್​ನಲ್ಲಿ ಅಡ್ಡಾಡುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸೋಮವಾರದಂದು ರಾಜ್ಯದ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು. ವಿಶೇಷವೆಂದರೆ ವೀಲ್​ಚೇರ್​ ಮೇಲೆ ಕುಳಿತೇ 8 ಕಿಮೀ ಉದ್ದದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಬಂಗಾಳದಲ್ಲಿ ಚುನಾವಣಾ ಪ್ರಚಾರದ ಭಾಗವಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಕಾರ್ಯಕರ್ತರು ಮಮತಾ ಅವರ ಹಿಂದ ಪಾದಯಾತ್ರೆ ಮೂಲಕ ಸಾಗಿ ಬಂದರು. ಪಾದಯಾತ್ರೆ ಮುಗಿದ ನಂತರ ಸಭೆ ಇದ್ದು, ಅದರಲ್ಲಿ ಮಮತಾ ಮಾತನಾಡಿದ್ದಾರೆ. ಪಾದಯಾತ್ರೆಯ ವಿಡಿಯೋವನ್ನು ಟಿಎಂಸಿ ಪಕ್ಷವು ತನ್ನ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದೆ.

ಪಶ್ಚಿಮ ಬಂಗಾಳದಲ್ಲಿ ಒಟ್ಟು ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಮೊದಲನೇ ಹಂತದ ಮತದಾನ ಮುಗಿದಿದ್ದು, ಇನ್ನು ಏಳು ಹಂತದ ಮತದಾನ ಬಾಕಿಯಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net