

ಪಶ್ಚಿಮ ಬಂಗಾಳ: ಇದೇ ಜುಲೈ 01ರಿಂದ ಹೊಸ ಅಪರಾಧ ಕಾನೂನುಗಳನ್ನು ಜಾರಿಗೊಳಿಸಲು ಇದೀಗ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಧ್ವನಿ ಎತ್ತಿದ್ದು, ಈ ಕಾನೂನುಗಳನ್ನು ತಕ್ಷಣವೇ ಜಾರಿ ಮಾಡಬೇಡಿ, ದಯವಿಟ್ಟು ಮುಂದೂಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮುಖೇನ ಮನವಿ ಮಾಡಿದ್ದಾರೆ.
ಮಮತಾ ಬ್ಯಾನರ್ಜಿ ಬರೆದಿರುವ ಪತ್ರದಲ್ಲಿ, ಜುಲೈ 1ರಂದು ಜಾರಿಗೆ ಬರಲಿರುವ ಮೂರು ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ (BNA) 2023, ಭಾರತೀಯ ಸಾಕ್ಷ್ಯ ಕಾಯ್ದೆ (BSA) 2023 ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಅನುಷ್ಠಾನವನ್ನು ಮುಂದೂಡುವುದು ಸೂಕ್ತ ಎಂದು ಪ್ರಧಾನಿ ಮೋದಿಯನ್ನು ಒತ್ತಾಯಿಸಿದ್ದಾರೆ. ಇದಕ್ಕೆ ಸಿಎಂ ಕೊಟ್ಟ ಕಾರಣ ಹೀಗಿದೆ.
"146 ಸಂಸದರನ್ನು ಅಮಾನತುಗೊಳಿಸಿದ ಸಂದರ್ಭದಲ್ಲಿಯೇ ಈ ಮೂರು ಮಸೂದೆಗಳನ್ನು ಆತುರದಿಂದ ಲೋಕಸಭೆಯಲ್ಲಿ ಪಾಸ್ ಮಾಡಲಾಗಿದೆ. ಯಾವುದೇ ಚರ್ಚೆಗಳನ್ನು ಮಾಡದೆ, ನಿಮ್ಮದೇ ಕೇಂದ್ರ ಸರ್ಕಾರ ಈ ಬಿಲ್ ಮೂರು ಬಿಲ್ಗಳನ್ನು ಅಂಗೀಕರಿಸಿದೆ. ಪ್ರಜಾಪ್ರಭುತ್ವದ ಕರಾಳ ಸಮಯದಲ್ಲಿ ಈ ವಿಧೇಯಕಗಳನ್ನು ಸರ್ವಾಧಿಕಾರಿ ರೀತಿಯಲ್ಲಿ ಅಂಗೀಕರಿಸಲಾಗಿದೆ. ಈ ವಿಷಯವು ಈಗ ಪರಿಶೀಲನೆಗೆ ಅರ್ಹ. ಜಾರಿಗೊಳಿಸುವ ದಿನಾಂಕವನ್ನು ಈಗ ಮುಂದೂಡಬೇಕು ಎಂದು ನಾನು ಆಗ್ರಹಿಸುತ್ತೇನೆ. ಇದಕ್ಕೆ ಕಾರಣಗಳು ಎರಡು ಪಟ್ಟು, ನೈತಿಕ ಮತ್ತು ಪ್ರಾಯೋಗಿಕ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ,(ಏಜೆನ್ಸೀಸ್).