ಜೈಲರ್ ಚಿತ್ರದ ಈ ವಿಲನ್ ವರ್ಮನ್ ನಿಜಕ್ಕೂ ಯಾರು? ಚಿತ್ರ ನೋಡಿದವ್ರಿಗೆ ಕಾಡುತ್ತಿರುವ ಪಾತ್ರ

jm
Published on

ನಿನ್ನೆಯಷ್ಟೆ ಜೈಲರ್​ ಸಿನಿಮಾ ರಿಲೀಸ್​ ಆಗಿದೆ. ಈ ಚಿತ್ರ ನೋಡಿದವ್ರಿಗೆ ಒಂದು ಪಾತ್ರ ಕಾಡುತ್ತಿದೆ. ಆ ಪಾತ್ರದ ಮೂಲಕವೇ ಇಡೀ ಸಿನಿಮಾ ಶುರು ಆಗುತ್ತದೆ. ವಿಲನ್ ಪಾತ್ರಕ್ಕೆ ಇಲ್ಲಿ ಕೊಟ್ಟ ಮಹತ್ವ ಅಷ್ಟಿದೆ.ರಜನಿಕಾಂತ್ ಚಿತ್ರದಲ್ಲಿದ್ದರೂ ಸಿನಿಮಾ ಶುರು ಆಗೋದು ಈ ಒಬ್ಬ ವಿಲನ್ ಪಾತ್ರಧಾರಿ ಕಲಾವಿದನಿಂದಲೇ ಅನ್ನೋದು ಕೂಡ ಅಷ್ಟೇ ವಿಶೇಷ ಅನಿಸುತ್ತಿದೆ.

"ತಿಳಿತಿಲ್ಲೋ" ಅನ್ನೋದನ್ನ ಮಲೆಯಾಳಂ ಭಾಷೆಯಲ್ಲಿಯೇ ಹೇಳೋ ಈ ವಿಲನ್ ಅಂತಿಂತ ಕಲಾವಿದ ಅಲ್ಲ ಬಿಡಿ. ಒಂದು ರೀತಿ ಸೈಕೋನೇ ಅನ್ನೋಮಟ್ಟಿಗೆ ಜೈಲರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.


ಜೈಲರ್ ಸಿನಿಮಾದಲ್ಲಿ ಈ ವಿಲನ್ ಪಾತ್ರಧಾರಿಗೆ ಹೆಚ್ಚಿನ ಮಹತ್ವ ಸಿಕ್ಕಿದೆ. ಡೈರೆಕ್ಟರ್ ನೆಲ್ಸನ್ ತುಂಬಾನೇ ಸ್ಪೇಸ್ ಕೊಟ್ಟಿದ್ದಾರೆ. ಆ ಕಾರಣಕ್ಕೇನೆ ಕೇರಳದ ಈ ಕಲಾವಿದ ಮುಕ್ತವಾಗಿಯೇ ಅಭಿನಯಿಸಿದ್ದಾರೆ. ಚಿತ್ರ-ವಿಚಿತ್ರ ಮ್ಯಾನರಿಸಂ ಈ ಪಾತ್ರಕ್ಕಿದೆ. ಸಿಗಾರ್​​​ ಸೇದೋ ಚಟವೂ ಇಲ್ಲಿ ಹಠದಂತೆ ಕಾಣಿಸುತ್ತದೆ.
ಸಿನಿಮಾದಲ್ಲಿ ವಿಚಿತ್ರವಾಗಿ ಕಾಣಿಸೋ ಈ ನಟ ರಿಯಲ್‌ ಲೈಫ್‌ ಅಲ್ಲಿ ಮಲ್ಟಿ ಟ್ಯಾಲೆಂಟೆಡ್ ಕಲಾವಿದ ಆಗಿದ್ದಾರೆ. ಕೇರಳ ರಾಜ್ಯ ಸರ್ಕಾರ ಈ ನಟನಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಿದೆ. ನಟನೆ ಹೊರತಾಗಿ ಗಾಯಕನ ಕೂಡ ತಿಳಿದಿದೆ. ಇದಷ್ಟೇ ಅಲ್ಲ, ಸಂಗೀತ ನಿರ್ದೇಶನ ಕೂಡ ತಿಳಿದುಕೊಂಡಿದ್ದಾರೆ.


ಈ ನಟನ ಹೆಸರು ವಿನಾಯಕನ್ ಟಿ.ಕೆ. ಅಂತಲೇ ಇದೆ. ಕೇರಳ ಮೂಲದ ವಿನಾಯಕನ್, ಮಲೆಯಾಳಂ ಸಿನಿಮಾರಂಗದಲ್ಲಿ ಸಾಕಷ್ಟು ಚಿತ್ರ ಮಾಡಿದ್ದಾರೆ. ತಮಿಳು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಮಲೆಯಾಳಂ ಭಾಷೆಯ ಮಾಂತ್ರಿಕಂ ಹೆಸರಿನ ಸಿನಿಮಾದಲ್ಲಿ ವಿನಾಯಕನ್ ಒಂದು ಕ್ಯಾಮಿಯೋ ರೋಲ್ ಮಾಡಿದ್ದರು. 1995 ರಲ್ಲಿ ಬಂದ ಈ ಚಿತ್ರದ ಮೂಲಕ ಬಣ್ಣ ಹಚ್ಚಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net