ಮಲ್ಪೆ ಬೀಚ್​ನಲ್ಲಿ ಸಿಕ್ಕ 22 ಕೆ.ಜಿ. ತೂಕದ ಗೋಳಿ ಮೀನು ಬರೋಬ್ಬರಿ 2.34 ಲಕ್ಷ ರೂ.ಗೆ ಸೇಲ್​!

goli fish
Published on

ಉಡುಪಿ: ಈ ಒಂದು ಮೀನಿನ ಬೆಲೆ ಬರೋಬ್ಬರಿ 2,34,080 ರೂಪಾಯಿ! ಮಲ್ಪೆ ಬಂದರಿನ ಮೀನುಗಾರರ ಬಲೆಗೆ ಸಿಕ್ಕ 22 ಕೆ.ಜಿ. ತೂಕದ ಈ ಮೀನು ಮೀನುಗಾರರ ಪಾಲಿಗೆ ಲಾಭದಾಯಕವಾಗಿದೆ.

ಅರೇ, ಇದ್ಹೇನಿದು? ಕೇವಲ 22 ಕೆ.ಜಿ. ತೂಕದ ಮೀನಿಗೆ ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿದ್ರಾ? ಎಂದು ಉಬ್ಬೇರಿಸಬೇಡಿ. ಇದು ಗೋಳಿ ಮೀನು. ಔಷಧಕ್ಕೆ ಬಳಕೆಯಾಗುವ ಗೋಳಿ ಮೀನಿಗೆ ಬೇಡಿಕೆ ಮತ್ತು ಬೆಲೆ ಹೆಚ್ಚು.

ಆಳಸಮುದ್ರ ಮೀನುಗಾರಿಕಾ ಬೋಟ್‌ನ ಬಲೆಗೆ ಬಿದ್ದ ಗೋಳಿ ಮೀನನ್ನು ಮಲ್ಪೆ ಬಂದರಿನಲ್ಲಿ ಹರಾಜು ಹಾಕಲಾಯಿತು. 2,34,080 ರೂ.ಗೆ ಮಾರಾಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net