ಪತ್ನಿ ರಾಧಾಬಾಯಿ ಜತೆಗೂಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ಮತದಾನ

IMG-20240507-WA0046
Published on

ವಿಜಯವಾಣಿ ಸುದ್ದಿ ಜಾಲ ಕಲಬುರಗಿ

ಎಐಸಿಸಿ ಅಧ್ಯಕ್ಷರಾದ ಹಾಗೂ ರಾಜ್ಯ ಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ಅವರ ಶ್ರೀಮತಿ ರಾಧಾಬಾಯಿ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ನಗರದ ಬ್ರಹ್ಮಪುರ ಬಡಾವಣೆಯ ಬಸವನಗರದ ಕನ್ನಡ ಹಿರಿಯ ಪ್ರಾಥಮಿಕ‌ ಶಾಲೆಯ ಬೂತ್ ನಂಬರ್ 120 ರಲ್ಲಿ ಮತದಾನ ಮಾಡಿದರು.

ಬಳಿಕೆ ಮಾಧ್ಮಮದವರೊಂದಿಗೆ, ದೇಶಕ್ಕೆ ಕಳೆದು ಹತ್ತು ವರ್ಷಗಳಿಂದ ದುರಾಡಳಿತ ನಡೆಸಿದ ಬಿಜೆಪಿ ಸೋಲಲಿದೆ. ರಾಜ್ಯದಲ್ಲಿ 25 ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ ಎಂದರು. ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net