

ತಿ.ನರಸೀಪುರ : ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮಲ್ಲಣ್ಣ, ಉಪಾಧ್ಯಕ್ಷರಾಗಿ ಟಿ.ಸಿ.ಫಣೀಶ್ ಕುಮಾರ್ ಶನಿವಾರ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಡಣಾಯಕನಪುರ ಮಲ್ಲಣ್ಣ, ಉಪಾಧ್ಯಕ್ಷ ಸ್ಥಾನಕ್ಕೆ ಹಳೆ ತಿರುಮಕೂಡಲಿನ ಟಿ.ಸಿ.ಫಣೀಶ್ ಕುಮಾರ್ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರಿಂದ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು.
ಸಹಕಾರ ಸಂಘದ ಮೇಲೆ ಪ್ರಾಬಲ್ಯ ಸಾಧಿಸಿರುವ ಮಲ್ಲಣ್ಣ ಅವರು ಮೂರನೇ ಬಾರಿಗೆ ಅಧ್ಯಕ್ಷರಾದರೆ, ಟಿ.ಸಿ.ಫಣೀಶ್ ಕುಮಾರ್ ಮೊದಲ ಬಾರಿಗೆ ಉಪಾಧ್ಯಕ್ಷ ಗದ್ದುಗೆ ಏರಿದರು. ಚುನಾವಣಾಧಿಕಾರಿ ಕಾರ್ಯ ನಿರ್ವಹಿಸಿದ ಸತೀಶ್ ಅವಿರೋಧ ಆಯ್ಕೆ ಪ್ರಕಟಿಸಿದರು. ಫಲಿತಾಂಶದ ಬಳಿಕ ಅಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಅಧ್ಯಕ್ಷ ಮಲ್ಲಣ್ಣ ಮಾತನಾಡಿ, ಸಹಕಾರ ಸಂಘದ ಸಮಗ್ರ ಅಭಿವೃದ್ಧಿಗೆ ಹಾಗೂ ರೈತರ ಹಿತವನ್ನು ಕಾಪಾಡಲು ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ತಿಳಿಸಿದರು.
ಸಂಘದ ನಿರ್ದೇಶಕರಾದ ಬಿ.ರಾಘವೇಂದ್ರ, ಎನ್.ಶೇಖರ್, ಮಹಾಲಿಂಗಪ್ಪ, ಬಿ.ಸುಂದರಸ್ವಾಮಿ, ನಾಗಮ್ಮ, ಎಂ. ನಾಗರತ್ನ, ಎಂ. ಮಹದೇವಯ್ಯ, ಪ್ರಕಾಶ್ ಕುಮಾರ, ಬಿ.ಎಂ. ಮಹದೇವಸ್ವಾಮಿ, ಬಸವರಾಜು, ಮುಂಖಡರಾದ ಶಿವಪ್ರಸಾದ್, ಫ್ಯಾನ್ಸಿ ಮೋಹನ್, ಎಂ.ಎಂ.ಜಯಣ್ಣ, ತಾ.ಪಂ ಮಾಜಿ ಸದಸ್ಯ ಎಂ. ಚಂದ್ರಶೇಖರ್, ಕಿರಗಸೂರು ಗ್ರಾಪಂ ಅಧ್ಯಕ್ಷ ಸಿ.ನಿಂಗರಾಜು, ತಾಲೂಕು ಬಿಜೆಪಿ ಅಧ್ಯಕ್ಷ ಶಿವಕುಮಾರ್(ಸತ್ಯಪ್ಪ), ಎಂಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎನ್.ಎಸ್.ಶೇಖರ್, ಮುಖಂಡರಾದ ಕೆಬಿಇ ಸಿದ್ದಲಿಂಗಸ್ವಾಮಿ, ಬಜ್ಜಿ ನಿಂಗಪ್ಪ, ಸಾಲೂರು ಸ್ವಾಮಿ, ಸಿ.ಮಹದೇವ, ಬಿ.ಮಂಟೇಲಿಂಗಪ್ಪ, ತಾತ ನಾಗರಾಜು, ಲಕ್ಶ್ಮಣ, ಅಕ್ಕಿ ನಾಗಪ್ಪ, ಮನ್ನೇಹುಂಡಿ ಪರಶಿವ, ನಾಗರಾಜು, ಗುರುಪ್ರಸಾದ್, ನೂತನ, ಗೋವಿಂದರಾಜು, ನಿಲಸೋಗೆ ನಂಜುಂಡಸ್ವಾಮಿ, ಯಜಮಾನ್ ಪುಳ್ಳಾರಿಗೌಡ ಹಾಗೂ ಇತರರು ಇದ್ದರು.