ಮಾಲೆಗಾಂವ್ ಸ್ಫೋಟ ಪ್ರಕರಣ;ಆರ್​ಎಸ್ಎಸ್​ ಮುಖ್ಯಸ್ಥರನ್ನು ಬಂಧಿಸಲು ಆದೇಶಿಸಲಾಗಿತ್ತು; ನಿವೃತ್ತ ಎಟಿಎಸ್ ಅಧಿಕಾರಿ| malegaon

Untitled design (3)
Published on

ಮಹಾರಾಷ್ಟ್ರ; 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಏಳು ಜನರನ್ನು ಖುಲಾಸೆಗೊಳಿಸಿದ ಬಳಿಕ, ಮಾಜಿ ತನಿಖಾ ಅಧಿಕಾರಿಯೊಬ್ಬರು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತನಿಖೆಯ ಸಮಯದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬಂಧಿಸಲು ಆದೇಶಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಆ ಸಂದರ್ಭದಲ್ಲಿ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರ್​​ಎಸ್​ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್ ಅವರನ್ನು ಸಿಲುಕಿಸುವ ಪಿತೂರಿ ನಡೆದಿತ್ತು, ನನ್ನ ಬಾಸ್ ಪರಮ್ ಬೀರ್ ಸಿಂಗ್ ಮತ್ತು ಇತರ ಅಧಿಕಾರಿಗಳು ಅವರನ್ನು ಬಂಧಿಸಲು ನನಗೆ ಆದೇಶಿಸಿದ್ದರು ಎಂದು ಮಾಜಿ ಎಟಿಎಸ್ ಅಧಿಕಾರಿ ಮೆಹಬೂಬ್ ಮುಜಾವರ್ ಮಾಹಿತಿ ನೀಡಿದ್ದಾರೆ.

ಸ್ಫೋಟದ ತನಿಖೆ ನಡೆಸಿದ ಎಟಿಎಸ್ ತಂಡದ ಭಾಗವಾಗಿದ್ದ ಮೆಹಬೂಬ್ ಮುಜಾವರ್, ನಾನು ಈ ತಪ್ಪು ಕೆಲಸ ಮಾಡಲಿಲ್ಲ ಅದಕ್ಕಾಗಿ ನನ್ನನ್ನು ಶಿಕ್ಷಿಸಲಾಯಿತು, ಜೈಲಿಗೆ ಕಳುಹಿಸಲಾಯಿತು ಮತ್ತು ಮಾನಹಾನಿ ಮಾಡಲಾಯಿತು ಎಂದಿದ್ದಾರೆ. ಮೋಹನ್ ಭಾಗವತ್ ಅವರಂತಹ ದೊಡ್ಡ ವ್ಯಕ್ತಿಯನ್ನು ಬಂಧಿಸಲು ನಾನು ಮುಂದೆ ಹೋಗಲಿಲ್ಲ. ನಾನು ಆದೇಶಗಳನ್ನು ಪಾಲಿಸದ ಕಾರಣ, ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಯಿತು ಅದು ನನ್ನ 40 ವರ್ಷಗಳ ವೃತ್ತಿಜೀವನವನ್ನು ಹಾಳುಮಾಡಿತು ಎಂದು ಹೇಳಿದ್ದಾರೆ.

ಮಾಲೆಗಾಂವ್ ಸ್ಫೋಟ ಪ್ರಕರಣದ ಎಲ್ಲಾ ಏಳು ಆರೋಪಿಗಳನ್ನು ಎನ್​ಐಎ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಮತ್ತು ಕರ್ನಲ್ ಪುರೋಹಿತ್ ಸೇರಿದಂತೆ ಎಲ್ಲಾ 7 ಆರೋಪಿಗಳನ್ನು ಎನ್‌ಐಎ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. ಆರಂಭದಲ್ಲಿ ಎಟಿಎಸ್ ಪ್ರಕರಣದ ತನಿಖೆ ನಡೆಸಿತ್ತು, ಆದರೆ ನಂತರ ಅದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಂಡಿತು.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net