

ನವದೆಹಲಿ: ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (AIFF) ಸ್ಪೇನ್‌ನ ಮನೋಲೋ ಮಾರ್ಕ್ವೆಜ್ ಅವರ ಉತ್ತರಾಧಿಕಾರಿಯಾಗಿ ಮಾಜಿ ಅಂತರರಾಷ್ಟ್ರೀಯ ಖಾಲಿದ್ ಜಮಿಲ್ ಅವರನ್ನು ತಂಡದ ಹೊಸ ರಾಷ್ಟ್ರೀಯ ತರಬೇತುದಾರರನ್ನಾಗಿ ನೇಮಿಸಿದೆ.
ಖಾಲಿದ್, ಪೂರ್ವ ಬಂಗಾಳ ಮತ್ತು ಮೋಹನ್ ಬಗಾನ್ ತಂಡದ ಮಾಜಿ ಮ್ಯಾನೇಜರ್ ಆಗಿದ್ದರು. ಜಮ್ಶೆಡ್‌ಪುರ ಎಫ್‌ಸಿಗೆ ತರಬೇತುದಾರರಾಗಿರುವ ಜಮಿಲ್, ಭಾರತೀಯ ತಂಡದ ಕೋಚ್ ಆಗಿ ಯಾವಾಗ ಕರ್ತವ್ಯಕ್ಕೆ ಹಾಜಾರಾಗುತ್ತಾರೆ ಎಂಬುದನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಅಧಿಕೃತವಾಗಿ ತಿಳಿಸಿಲ್ಲ.
2017 ರಲ್ಲಿ ಐಜ್ವಾಲ್ ಫುಟ್ಬಾಲ್ ಕ್ಲಬ್ ಅನ್ನು ಐ-ಲೀಗ್ ಪ್ರಶಸ್ತಿಗೆ ಕೊಂಡೊಯ್ದಿದ್ದ ಜಮಿಲ್, 13 ವರ್ಷಗಳಲ್ಲಿ ರಾಷ್ಟ್ರೀಯ ತಂಡದ ಕೋಚ್ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2011 ರಿಂದ 2012 ರವರೆಗೆ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದ ಸವಿಯೊ ಮೆಡೆರಾ, ಬ್ಲೂ ಟೈಗರ್ಸ್ ತಂಡವನ್ನು ಮುನ್ನಡೆಸಿದ ಕೊನೆಯ ಭಾರತೀಯರಾಗಿದ್ದರು.
(ಏಜೆನ್ಸೀಸ್)