ಕುರ್ಚಿಯಲ್ಲಿ ಸಿಲುಕೊಕೊಂಡಿದ್ದ ಬೆರಳನ್ನು ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಕರೆಸಿದ ಮಹಿಳೆ! ವಿಡಿಯೋ ವೈರಲ್​...Finger Stuck

untitled-design-10-6909ede37721e
Published on

ಮಲೇಷ್ಯಾ: ಮಹಿಳೆಯೊಬ್ಬಳ ಬೆರಳು ಪ್ಲಾಸ್ಟಿಕ್​ ಕುರ್ಚಿಯ ಸಣ್ಣ ರಂಧ್ರದಲ್ಲಿ ಸಿಲುಕಿಕೊಂಡ (Finger Stuck) ನಂತರ ಅಗ್ನಿಶಾಮಕ ದಳದವರ ಸಹಾಯ ಪಡೆದು ಸಿಲುಕಿಕೊಂಡಿದ್ದ ಬೆರಳನ್ನು ತೆಗೆದುಕೊಂಡ ಹಾಸ್ಯಸ್ಪದ ಘಟನೆಯು ಮಲೇಷ್ಯಾದಲ್ಲಿ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಘಟನೆ ಏನು?

ಮಹಿಳೆಯೊಬ್ಬಳು ಕುಳಿತುಕೊಂಡಾಗ ತನ್ನ ಬಲಗೈನ ಬೆರಳನ್ನು ಪ್ಲಾಸ್ಟಿಕ್ ಕುರ್ಚಿಯ ಸಣ್ಣ ರಂಧ್ರದಲ್ಲಿ ಸಿಲುಕಿಸಿಕೊಂಡಿದ್ದಾಳೆ. ಈ ವೇಳೆ ಹಲವಾರು ಬಾರಿ ಪ್ರಯತ್ನ ಪಟ್ಟರೂ ಅದನ್ನು ಬಿಡಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಗೆ ಕರೆಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾಳೆ.

ಆಕೆಯ ಕರೆಗೆ ರಕ್ಷಣಾ ತಂಡವು ಶೀಘ್ರವಾಗಿ ಆಗಮಿಸಿದ್ದು, ವಿಶೇಷ ಕತ್ತರಿಸುವ ಸಾಧನಗಳನ್ನು ಬಳಸಿಕೊಂಡು ಮಹಿಳೆಯ ಬೆರಳಿಗೆ ಗಾಯವಾಗದಂತೆ ಕಾರ್ಯಾಚರಣೆ ನಡೆಸಿ ಸಿಲುಕಿಕೊಂಡಿದ್ದ ಬೆರಳನ್ನು ಹೊರತೆಗೆದಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವಿಡಿಯೋದಲ್ಲಿ ರಕ್ಷಣಾ ಸಿಬ್ಬಂದಿಗಳು ಬೆರಳಿನ ಸುತ್ತ ಇರುವ ಪ್ಲಾಸ್ಟಿಕ್​ನ್ನು ಕೌಶಲ್ಯದಿಂದ ಕತ್ತರಿಸುತ್ತಿದ್ದಾರೆ. ಈ ವೇಳೆ ಮಹಿಳೆಯು ಆಘಾತಕ್ಕೀಡಾಗದೇ ಶಾಂತವಾಗಿ ಕುಳಿತುಕೊಂಡಿರುವುದನ್ನು ವಿಡಿಯೋ ತೋರಿಸಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ನಂತರ ಅನೇಕ ಬಳಕೆದಾರರು ಹಾಸ್ಯಮಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಒಬ್ಬ ಬಳಕೆದಾರ ಆ ಮಹಿಳೆಯು ಮೊದಲು ಯಾವ ರೀತಿಯಲ್ಲಿ ಬೆರಳನ್ನು ಸಿಕ್ಕಿಸಿಕೊಂಡಿದ್ದಾಳೆ ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಬೆರಳಿನ ಸುತ್ತಲೂ ಎಣ್ಣೆ ಹಚ್ಚಿದ್ದರೆ ಸುಲಭವಾಗಿ ಹಾಗೂ ವೇಗವಾಗಿ ಹೊರತೆಗೆಯಲು ಸಾಧ್ಯವಾಗುತ್ತಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net