

ಬೆಂಗಳೂರು: ಶಿವರಾಜಕುಮಾರ್ ಅಭಿನಯಿಸುತ್ತಿರುವ, ಶ್ರೀನಿ ನಿರ್ದೇಶನದ ಚಿತ್ರ ‘ಘೋಸ್ಟ್’. ‘ಬೀರ್ಬಲ್’ ಬಳಿಕ ಶ್ರೀನಿ ನಿರ್ದೇಶಿಸುತ್ತಿರುವ ಚಿತ್ರ ಇದಾಗಿದ್ದು, ಈ ಮೂಲಕ ಕನ್ನಡದಲ್ಲೊಂದು ಯೂನಿವರ್ಸ್ ನಿರ್ಮಿಸಲಾಗುತ್ತಿದೆ.
ಇತ್ತೀಚೆಗೆ ಶಿವರಾಜಕುಮಾರ್ ಹುಟ್ಟುಹಬ್ಬದಂದು ‘ಬಿಗ್ ಡ್ಯಾಡಿ’ ಎಂಬ ಚಿತ್ರದ ಟೀಸರ್ ಬಿಡುಗಡೆ ಮಾಡಿದ ಚಿತ್ರತಂಡ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿತ್ತು. ವಿಂಟೇಜ್ ಶೇಡ್ನಲ್ಲಿ ಶಿವಣ್ಣ ಮಿಂಚಿದ್ದರು. ಸದ್ಯ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬಿಜಿಯಿದೆ. 1,800 ವಿಎ್ಎಕ್ಸ್ ಶಾಟ್ಗಳಿದ್ದು, ಚಿತ್ರ ಅದ್ದೂರಿಯಾಗಿ ಮೂಡಿಬರುತ್ತಿದೆ ಎನ್ನಲಾಗಿದೆ. ಇನ್ನು ಶಿವರಾಜಕುಮಾರ್ ಜತೆ ಅರ್ಚನಾ ಜೋಯಿಸ್, ಬಾಲಿವುಡ್ ನಟ ಅನುಪಮ್ ಖೇರ್ ಹಾಗೂ ಪ್ರಶಾಂತ್ ನಾರಾಯಣ್ ಕೂಡ ನಟಿಸುತ್ತಿದ್ದಾರೆ.
ಜತೆಗೆ ಖ್ಯಾತ ಮಲಯಾಳಂ ನಟ ಜಯರಾಮ್ ಕೂಡ ‘ೋಸ್ಟ್’ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಅವರ ಭಾಗದ ಡಬ್ಬಿಂಗ್ ನಡೆದಿದೆ. ಖುದ್ದು ಜಯರಾಮ್ ಕನ್ನಡದಲ್ಲಿ ಡಬ್ ಮಾಡಿರುವುದು ವಿಶೇಷ. ‘ಘೋಸ್ಟ್’ ಚಿತ್ರ ಈ ದಸರಾ ಹಬ್ಬಕ್ಕೆ ರಿಲೀಸ್ ಆಗುವ ನಿರೀಕ್ಷೆಯಿದೆ.