

ಯಲ್ಲಾಪುರ: ಅಡಕೆ ವ್ಯವಹಾರಸ್ಥರ ಸಂಘ, ಸಂಕಲ್ಪ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ನೀನಾಸಂ ತಿರುಗಾಟ ತಂಡದಿಂದ ನಾಟಕ ಪ್ರದರ್ಶನ ಡಿ. 18 ಮತ್ತು 19ರಂದು ಪಟ್ಟಣದ ಗಾಂಧಿ ಕುಟೀರದಲ್ಲಿ ನಡೆಯಲಿದೆ ಎಂದು ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ. ಹೆಗಡೆ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.18 ರಂದು ಸಂಜೆ 6.30ಕ್ಕೆ ಶಾಸಕ ಶಿವರಾಮ ಹೆಬ್ಬಾರ ಕಾರ್ಯಕ್ರಮ ಉದ್ಘಾಟಿಸುವರು. ಕೆ.ವಿ. ಅಕ್ಷರ ನಿರ್ದೇಶನದಲ್ಲಿ ‘ಮಾಲತಿ ಮಾಧವ’ ನಾಟಕ ಪ್ರದರ್ಶನಗೊಳ್ಳಲಿದೆ. ಡಿ. 19 ರಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಕಾರ್ಯಕ್ರಮ ಉದ್ಘಾಟಿಸುವರು. ನಂತರ ವಿದ್ಯಾನಿಧಿ ವನಾರಸೆ ನಿರ್ದೇಶನದಲ್ಲಿ ‘ಅಂಕದ ಪರದೆ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಲೋಕನಾಥ ಗಾಂವ್ಕರ, ನಾರಾಯಣ ಭಟ್ಟ ಮಂಚಿಕೇರಿ, ಸುದ್ದಿಗೋಷ್ಠಿಯಲ್ಲಿದ್ದರು.