

ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ( Malaika Arora ) ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಫಿಟ್ನೆಸ್ ಫ್ರೀಕ್ ಎಂದೇ ಖ್ಯಾತಿ ಪಡೆದಿರುವ ಈ ಬ್ಯೂಟಿ ಸ್ಟಾರ್ ತನ್ನ ಪ್ರೀತಿ ಮತ್ತು ಸಂಬಂಧದ ಸಮಸ್ಯೆಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾಳೆ.
ಅರ್ಬಾಜ್ ಖಾನ್ ವಿಚ್ಛೇದನದ ನಂತರ 2018 ರಲ್ಲಿ ಮಲೈಕಾ ಅರ್ಜುನ್ ಜೊತೆ ಡೇಟಿಂಗ್ ಪ್ರಾರಂಭಿಸಿದರು. ಇವರಿಬ್ಬರು ಆಗಾಗ ಒಟ್ಟಿಗೆ ಕಾಣಸಿಗುತ್ತಿದ್ದರು. ಆದರೆ 2019 ರಲ್ಲಿ, ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಂಡರು ಮತ್ತು ವಯಸ್ಸಿನ ಅಂತರದಿಂದಾಗಿ ಜೋಡಿಯನ್ನು ಹಲವು ಬಾರಿ ಟ್ರೋಲ್ ಮಾಡಲಾಯಿತು. ಆದರೆ ಈ ಟ್ರೋಲಿಂಗ್ ಹೊರತಾಗಿಯೂ, ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅದೇನಾಯ್ತೋಗೊತ್ತಿಲ್ಲ ಈ ಜೋಡಿ ಬೇರೆಯಾಗಿದ್ದಾರೆ.
ಇತ್ತೀಚೆಗಷ್ಟೇ ಅರ್ಜುನ್ ಕಪೂರ್ ಅವರು ತಮ್ಮ ಸಿನಿಮಾದ ಪ್ರಚಾರದಲ್ಲಿ ಒಂಟಿಯಾಗಿರುವುದನ್ನು ಬಹಿರಂಗಪಡಿಸಿದ್ದಾರೆ. ಆದರೆ ಮಲೈಕಾಗೆ ಅರ್ಜುನ್ ಯಾಕೆ ದೂರವಾಗಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ.
ಇತ್ತೀಚೆಗೆ ಮಲೈಕಾ ಅರೋರಾ ರೆಸ್ಟೊರೆಂಟ್‌ನಿಂದ ವ್ಯಕ್ತಿಯೊಬ್ಬರ ಕೈ ಹಿಡಿದುಕೊಂಡು ಹೊರನಡೆಯುತ್ತಿರುವುದು ಕಂಡುಬಂದಿದೆ. ಅದರ ನಂತರ, ಮಲೈಕಾ ಇತ್ತೀಚೆಗೆ ಗಾಯಕ ಎ. ಪಿ. ಧಿಲ್ಲೋನ್ ಸಂಗೀತ ಕಚೇರಿಯಲ್ಲಿ ಭಾಗವಹಿಸಿದ್ದಾರೆ. ಈ ಗೋಷ್ಠಿಯಲ್ಲಿ, ಮಲೈಕಾ ಮತ್ತೆ ಅದೇ ನಿಗೂಢ ವ್ಯಕ್ತಿಯೊಂದಿಗೆ ಕಾಣಿಸಿಕೊಂಡರು.
ಆ ವ್ಯಕ್ತಿ ಯಾರು ಗೊತ್ತಾ ಈತನ ಹೆಸರು ರಾಹುಲ್ ವಿಜಯ್. ಈ ಗೋಷ್ಠಿಯಲ್ಲಿ ಮಲೈಕಾ ಅವರನ್ನು ವೇದಿಕೆಗೆ ಆಹ್ವಾನಿಸಲಾಗಿತ್ತು. ಎ. ಪಿ. ಧಿಲ್ಲೋನ್ ಅವರಿಗಾಗಿ ವಿಶೇಷ ಹಾಡನ್ನು ಹಾಡಿದ್ದಾರೆ. ಮಲೈಕಾ ತನ್ನ ಬಾಲ್ಯದ ಮೋಹ ಎಂದರು. ನಂತರ ಇಬ್ಬರೂ ವೇದಿಕೆಯಲ್ಲಿ ಪರಸ್ಪರ ಅಪ್ಪಿಕೊಂಡರು. ಬಳಿಕ ಬಾಯ್ ಫ್ರೆಂಡ್ ರಾಹುಲ್ ವಿಜಯ್ ಜೊತೆಗಿನ ಸೆಲ್ಫಿಯನ್ನು ಮಲೈಕಾ ಹಂಚಿಕೊಂಡಿದ್ದಾರೆ. ಇದರಿಂದಾಗಿ ಇವರಿಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರೊಂದಿಗೆ ಮಲೈಕಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.