

ಮುಂಬೈ: ಬಾಲಿವುಡ್ ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ(Malaika Arora) ಡೇಟಿಂಗ್ ಮಾಡುತ್ತಿದ್ದ ವಿಚಾರ ಗೊತ್ತೆ ಇದೆ. ಅವರಿಬ್ಬರು ಬ್ರೇಕಪ್ ವಿಚಾರ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮುನ್ನೆಲೆಗೆ ಬರುತಿತ್ತು. ಅವರ ಬ್ರೇಕಪ್ ವದಂತಿಗಳು ಬಂದಾಗಲೆಲ್ಲಾ ಈ ಜೋಡಿ ಜತೆಗಿರುವ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ನಾವು ಜತೆಗಿದ್ದೇವೆ ಎಂದು ಸ್ಪಷ್ಟಪಡಿಸುತ್ತಿದ್ದಾರೆ.
ಆದರೆ ಈ ಬಾರಿ ಬ್ರೇಕಪ್ ಆಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೂ, ಇವರಿಬ್ಬರಿಂದ ಯಾವುದೇ ಅಧಿಕೃತ ಪೋಸ್ಟ್ ಬಂದಿಲ್ಲ. ಇದು ಅಭಿಮಾನಿಗಳಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅರ್ಜುನ್ ಕಪೂರ್ ಮಾತನಾಡುತ್ತಿದ್ದಾಗ ಮಲೈಕಾ ಹೆಸರನ್ನು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಅರ್ಜುನ್ 'ಇಲ್ಲ, ಇಲ್ಲ! ನಾನು ಇನ್ನೂ ಸಿಂಪಲ್ ಆಗಿದ್ದೇನೆ ಎಂದು ಹೇಳಿದರು.
ಅರ್ಜುನ್ ಒಬ್ಬಂಟಿಯಾಗಿ ಇರುವುದಾಗಿ ಹೇಳಿದ ಕೆಲವೇ ಗಂಟೆಗಳಲ್ಲಿ ಮಲೈಕಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಮಲೈಕಾ ಮಾಡಿರುವ ಪೋಸ್ಟ್ ನೋಡಿದ ನೆಟ್ಟಿಗರು ಈ ಹೇಳಿಕೆಗಳು ಅರ್ಜುನ್ ಹೇಳಿಕೆಗೆ ಪ್ರತಿಕ್ರಿಯೆ ಎಂದು ಹೇಳುತ್ತಿದ್ದಾರೆ.
ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ 2018ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ ಅರ್ಜುನ್ ಮತ್ತು ಮಲೈಕಾ ಸದ್ಯ ಪರಸ್ಪರ ಅನ್ಫಾಲೋ ಮಾಡಿದ್ದಾರೆ. ಆದರೆ ಇಬ್ಬರೂ ಪರಸ್ಪರರ ಫೋಟೋಗಳನ್ನು ಡಿಲೀಟ್ ಮಾಡಿಲ್ಲ. (ಏಜೆನ್ಸೀಸ್)