ಭಾರತ ಒಂದು ವಿಚಿತ್ರ ಸ್ಥಳ; ಹಾಲಿವುಡ್​ ನಟ ಹಗ್ ಗ್ರಾಂಟ್ ಹೀಗೆಳಿದ್ದೇಕೆ | Hugh Grant

Untitled design - 2024-10-30T180804.325
Published on

ಮುಂಬೈ: ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಆರ್ಟ್ಸ್ ವಿಜೇತ ನಟ ಹಗ್ ಗ್ರಾಂಟ್(Hugh Grant) 1988ರಲ್ಲಿ ಫ್ರೆಂಚ್ ಸಿನಿಮಾದ ಚಿತ್ರೀಕರಣಕ್ಕಾಗಿ ಭಾರತಕ್ಕೆ ಭೇಟಿ ಸಮಯವನ್ನು ನೆನಪಿಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ನಡೆದ ಆಶ್ಚರ್ಯಕರ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತ ಹಗ್​ ಗ್ರಾಂಟ್​​ 1998ರಲ್ಲಿ ನನಗೆ ಭಾರತ ಒಂದು ವಿಚಿತ್ರ ಸ್ಥಳವಾಗಿತ್ತು ಎಂದು ಹೇಳಿದ್ದಾರೆ. ಅಲ್ಲದೆ ಭಾರತದಲ್ಲಿ ತಮಗಾದ ಆಶ್ಚರ್ಯದ ವಿಷಯವನ್ನು ಹಂಚಿಕೊಂಡಿದ್ದಾರೆ. ನನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ಅಂದರೆ 20ರ ದಶಕದಲ್ಲಿ ಕೆಲವು ವಿಚಿತ್ರ ಚಲನಚಿತ್ರಗಳನ್ನು ಮಾಡಿದ್ದೇನೆ. ಅದರಲ್ಲಿ ಒಂದು ಫ್ರೆಂಚ್​ ಸಿನಿಮಾವನ್ನು ಭಾರತದಲ್ಲಿ ಚಿತ್ರೀಕರಿಸಲಾಗಿದೆ.

1998ರಲ್ಲಿ ನಾನು ಕೊಲ್ಕತಾಗೆ ತೆರಳಿದ್ದೆ. ಅಲ್ಲಿ ಹೋದಾಗ ಎಲ್ಲರೂ ತಮ್ಮ ಬ್ಯಾಗ್​ಗಳನ್ನು ಎತ್ತಿಕೊಂಡು ಹೋಗುತ್ತಿದ್ದರು. ನಾನು ನನ್ನ ಬ್ಯಾಗ್​​ನೊಂದಿಗೆ ಹೊರನಡೆದೆ. ಚಿಕ್ಕ ಹುಡುಗ ನನ್ನ ಬಳಿ ಬಂದು ಹಲೋ ಸರ್​​, ನಾನು ನಿಮ್ಮ ಡ್ರೈವರ್​ ಎಂದು ಹೇಳಿದ. 11 ವರ್ಷದ ಹುಡುಗನ ಮಾತು ಕೇಳಿ ನನಗೆ ಆಶ್ಚರ್ಯವಾಯಿತು.

ಬಳಿಕ ನಿಮಗೆ ಖಚಿತವಾಗಿದೆಯೇ ಎಂದುನಾನು ಕೇಳಿದೆ. ಅದಕ್ಕೆ ಉತ್ತರಿಸಿದ ಅವರು ಹೌದು ಸರ್​, ಇಡೀ ಸಿನಿಮಾದ ಶೂಟಿಂಗ್​​ ಮುಗುಯುವವರೆಗೂ ನಾನೇ ಚಾಲಕ ಎಂದು ಹೇಳಿದರು. ಓಹ್​, ನೀವು ಡ್ರೈವ್​ ಮಾಡಬಹುದದೆ ಎಂದು ನಾನು ಹೇಳಿದೆ. ನನಗೆ ನನ್ನ ಅನುಮಾನವಿತ್ತು, ಆದರೆ ಅವನು ನಾಲ್ಕು ದಿನ ಚಾಲಕನ ಕೆಲಸ ಮಾಡಿದ. ದುರದೃಷ್ಟವಶಾತ್ ಅಪಘಾತದಿಂದಾಗಿ ಹುಡುಗ ತನ್ನ ಕೆಲಸವನ್ನು ಕಳೆದುಕೊಂಡ ಎಂದು ಹೇಳಿದರು.

ಹೀಗೆ ಭಾರತದಲ್ಲಿ ಸುತ್ತಾಡುವಾಗ ಸುಮಾರು ಎರಡು ತಿಂಗಳ ನಂತರ ಆ ಚಾಲಕನ ಭೇಟಿಯಾಯಿತು. ಕೊಲ್ಕತಾದ ರಸ್ತೆಯಲ್ಲಿ ನಾನು ಅವರನ್ನು ಮಾತನಾಡಿಸಿ ನೀವು ಹೇಗಿದ್ದೀರಿ ಎಂದು ಕೇಳಿದೆ. ಅದಕ್ಕೆ ಅವರು ಸರ್​​ ನಾನು ಚೆನ್ನಾಗಿದ್ದೇನೆ, ಈಗ ಶಾಲಾ ಬಸ್ ಓಡಿಸುತ್ತಿದ್ದೇನೆ ಎಂದು ಹೇಳುತ್ತ ನಕ್ಕರು ಎಂದು ತಿಳಿಸಿದರು. ಸಂದರ್ಶನದಲ್ಲಿ ಈ ಘಟನೆಯು ಇದು ಒಂದು ಸಣ್ಣ ಜಗತ್ತು, ಸನ್ನಿವೇಶಗಳು ಎಷ್ಟು ಬೇಗನೆ ಬದಲಾಗಬಹುದು ಎಂಬುದನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು. 14 ಫೆಬ್ರವರಿ 2025ರಂದು ಥಿಯೆಟರ್​ಗಳಲ್ಲಿ ಬಿಡುಗಡೆಯಾಗಲಿರುವ 'ಬ್ರಿಡ್ಜೆಟ್ ಜೋನ್ಸ್: ಮ್ಯಾಡ್ ಅಬೌಟ್ ದಿ ಬಾಯ್'ನಲ್ಲಿ ಹಗ್​ ಗ್ರಾಂಟ್​​ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net