

ಬಾಲಿವುಡ್‌ನಲ್ಲಿ ಹಾಟೆಸ್ಟ್ ಜೋಡಿ ಎಂದು ಕರೆಯಲ್ಪಡುವ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಕಳೆದ 6 ವರ್ಷಗಳಿಂದ ಲಿವ್-ಇನ್ ರಿಲೇಷನ್ಶಿಪ್ನಲ್ಲಿ ಇದ್ದಾರೆ. ತಮ್ಮ ಸಂಬಂಧವನ್ನು 2018ರಲ್ಲಿ ಅಧಿಕೃತವಾಗಿ ಘೋಷಿಸಿದ್ದರು. ಅಂದಿನಿಂದ ಈ ಕಪಲ್ ಪಾರ್ಟಿ ಮಾಡುವುದು, ಟ್ರಿಪ್ ಹೋಗುವುದು, ಒಟ್ಟೊಟ್ಟಿಗೆ ಸುತ್ತಾಡುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆದರೆ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ನಡುವಿನ ಬ್ರೇಕಪ್ ಸುದ್ದಿ ಶುಕ್ರವಾರ (ಮೇ 31) ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.
ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ನಡುವಿನ ಬ್ರೇಕಪ್ ವಿಚಾರದ ಬಗ್ಗೆ ನಟಿಯ ಮ್ಯಾನೇಜರ್ ಪ್ರತಿಕ್ರಿಯಿಸಿದ್ದಾರೆ. ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಅವರು ಈಗ ಒಟ್ಟಿಗೆ ಇಲ್ಲ. ಮಲೈಕಾ ಇನ್ನೂ ಅರ್ಜುನ್ ಜತೆ ಡೇಟಿಂಗ್ ಮಾಡುತ್ತಿರುವುದನ್ನು ಮಲೈಕಾ ಮ್ಯಾನೇಜರ್ ಖಚಿತಪಡಿಸಿದ್ದಾರೆ. ಇಂಡಿಯಾ ಟುಡೇ ಜತೆ ಮಾತನಾಡಿದ ಅವರು, ಬ್ರೇಕಪ್ ವದಂತಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಬೇರೆ ಬೇರೆಯಾಗಿದ್ದಾರೆಯೇ ಎಂಬ ಪ್ರಶ್ನೆಗೆ ಮ್ಯಾನೇಜರ್, ಇಲ್ಲ.. ಇಲ್ಲ.. ಇದೆಲ್ಲ ವದಂತಿ ಎಂದು ಹೇಳಿದ್ದಾರೆ.
ಅಂದಹಾಗೆ ಈ ಕಪನ್ ಬ್ರೇಕಪ್ ಸುದ್ದಿಯ ವದಂತಿ ಹರಿದಾಡುತ್ತಿರುವುದು ಇದೇ ಮೊದಲೆನಲ್ಲ. ಈ ಹಿಂದೆ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಅವರ ಬ್ರೇಕಪ್ ಬಗ್ಗೆ 2022ರಲ್ಲಿ ಇದೇ ರೀತಿಯ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಡಿತು. ಮಲೈಕಾ ಜತೆಗಿನ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಅರ್ಜುನ್ ವರದಿಗಳಿಗೆ ಪ್ರತಿಕ್ರಿಯಿಸಿದ್ದರು. "ಪ್ರಶ್ನಾರ್ಹ ವದಂತಿಗಳಿಗೆ ಅವಕಾಶವಿಲ್ಲ" ಎಂದು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದರು.
ಸದ್ಯ ಈ ವದಂತಿ ಬಗ್ಗೆ ನಟಿ ಮ್ಯಾನೇಜರ್ ಅವರಿಂದ ಸ್ಪಷ್ಟನೆ ಸಿಕ್ಕಿದೆ. ಆದರೆ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಅವರ ವೈಯಕ್ತಿಕ ಸ್ಪಷ್ಟನೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ.