

ಬೆಟ್ಟದಪುರ: ಮಕ್ಕಳು ಶೈಕ್ಷಣಿಕ ಚಟುವಟಿಕೆಯೊಂದಿಗೆ ಶಾಲಾ ಹಂತದಲ್ಲಿ ಸಿಗುವಂತಹ ವಿವಿಧ ಅವಕಾಶಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ರಾಜನಬಿಳಗೂಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಎ.ಡಿ ಬಸವರಾಜು ಹೇಳಿದರು.
ಬೆಟ್ಟದಪುರ ಸಮೀಪದ ರಾಜನಬಿಳಗೂಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮ ಮಾತನಾಡಿದ ಅವರು, ಮಕ್ಕಳು ಶೈಕ್ಷಣಿಕ ಚಟುವಟಿಕೆಯೊಂದಿಗೆ ಇತರ ರಂಗದಲ್ಲೂ ಕ್ರಿಯಾಶೀಲರಾಗಬೇಕು ಎಂದರು. ಮಕ್ಕಳ ಸಂತೆ ಹಿನ್ನಲೆ ಶಾಲೆಯ ಮಕ್ಕಳ ಬಜ್ಜಿ, ವಡೆ, ಬೋಂಡಾ, ಚುರುಮುರಿ, ಜ್ಯೂಸ್ ಸೇರಿ ವಿವಿಧ ಬಗೆಯ ಹಣ್ಣು, ತರಕಾರಿಗಳ ಮಾರಾಟ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಶಿಕ್ಷಕರಾದ ಬಿ.ಶಿಲ್ಪಶ್ರೀ, ಸಿ.ಆಶಾರಾಣಿ, ಎಚ್. ಎನ್. ರಾಜೀವ, ಜಿ.ಕೆ ಸರೋಜಾ ಸೇರಿದಂತೆ ಪಾಲಕರು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.