ಸಂಜೆಯ ತಿಂಡಿಗಾಗಿ ತಯಾರಿಸಿ ಪೆರಿ ಪೆರಿ ಆಲೂ ಬಾಲ್ಸ್​ | recipe

untitled-design-2025-09-02t162838702-68b6cdfaac7d2
Published on

recipe: ಇಂದಿನ ದಿನಗಳಲ್ಲಿ ಅನೇಕರು ಸಂಜೆ ವಿಧವಿಧವಾದ ತಿಂಡಿ ತಿನ್ನಲು ಬಯಸುತ್ತಾರೆ. ಆಹಾರ ಪ್ರಿಯರಿಗೆ ಸಂಜೆ ಏನಾದರೂ ತಿನ್ನಲೇ ಬೇಕು ಎಂದಾಗ ಅವರು ಆದಷ್ಟು ರಸ್ತೆ ಬದಿಯಲ್ಲಿರುವ ಅಥವಾ ಚಾಟ್ಸ್​ ಅಂಗಡಿಗಳಿಗೆ ಹೋಗಿ ತಮಗಿಷ್ಟವಾದ ಆಹಾರವನ್ನು ಸೇವಿಸುತ್ತಾರೆ. ಅಂತವರು ನಿಮ್ಮ ಮನೆಯಲ್ಲಿಯೇ ಸ್ವಲ್ಪ ಸಮಯದಲ್ಲಿ ಈ ರೀತಿಯ ಪೆರಿ ಪೆರಿ ಬಾಲ್ಸ್​ ತಯಾರಿಸಿ ಸೇವಿಸಿ..

ಬೇಕಾಗುವ ಪದಾರ್ಥಗಳು

* 3 ಆಲುಗಡ್ಡೆ

* 2 ಚಮಚ ಖಾರದಪುಡಿ

* 1 ಚಮಚ ಜೀರಿಗೆ

* ಕಾಳು ಮೆಣಸಿನ ಪುಡಿ

* ಉಪ್ಪು

* ಕಾನ್​ಫ್ಲೋರ್​

* ಎಣ್ಣೆ

ಮಾಡುವ ವಿಧಾನ

ಮೊದಲು ಆಲುಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದುಕೊಳ್ಳಿ. ನಂತರ ಒಂದು ಬೌಲ್​ಗೆ ಬೇಯಿಸಿದ ಆಲೂಗಡ್ಡೆ ಹಾಕಿ ಸ್ಮಾಶ್​ ಮಾಡಿ. ಅದಕ್ಕೆ ಖಾರದಪುಡಿ, ಜೀರಿಗೆ, ಕಾಳು ಮೆಣಸಿನ ಪುಡಿ, ಉಪ್ಪು ಹಾಗೂ ಕಾನ್​ಫ್ಲೋರ್​ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಚಿಕ್ಕ ಉಂಡೆಗಳನ್ನಾಗಿ ಎಣ್ಣೆಯಲ್ಲಿ ಕೆಂಪು ಬಣ್ಣ ಬರುವವರೆಗೂ ಕರಿಯಿರಿ. ಸ್ವಲ್ಪ ತಣ್ಣಗಾದ ನಂತರ ಟೊಮೆಟೋ ಸಾಸ್​ ಜೊತೆ ಸೇವಿಸಿ... (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net