

Recipe: ಗಾರ್ಲಿಕ್ ರೈಸ್ ಒಂದು ರುಚಿಕರ, ಸರಳ ಮತ್ತು ಸುಗಂಧಯುಕ್ತ ಖಾದ್ಯ ಎಂದು ಹೆಸರು ಪಡೆದಿದೆ.ಭಾರತೀಯ ಮತ್ತು ಇಂಡೋ-ಚೈನೀಸ್ ಪಾಕಪದ್ಧತಿಗಳಲ್ಲಿ ಜನಪ್ರಿಯವಾಗಿದೆ. ಅನೇಕ ಬಾರಿ ಮನೆಗಳಲ್ಲಿ ಮಕ್ಕಳು ಅಥವಾ ಹಿರಿಯರು ಬೆಳ್ಳುಳ್ಳಿ ಸೇವಿಸಲು ಆಸೆ ಪಡುವುದಿಲ್ಲ. ಅಂತಹ ಸಂದರ್ಭದಲ್ಲಿ ಊಟಕ್ಕೆ ಹಾಗೂ ಬೆಳಗಿನ ತಿಂಡಿಗೆ ಈ ಆರೋಗ್ಯಕರವಾದ ಗಾರ್ಲಿಕ್ ರೈಸ್ ಮಾಡುವುದರಿಂದ ಮನೆಯಲ್ಲಿರುವವರು ಇಷ್ಟಪಟ್ಟು ಸೇವಿಸುತ್ತಾರೆ.
* 2 ಕಪ್ ಅಕ್ಕಿ
* 8-10 ಎಸಳು ಬೆಳ್ಳುಳ್ಳಿ
* 1 ಸಣ್ಣ ಈರುಳ್ಳಿ
* 1-2 ಹಸಿಮೆಣಸಿನಕಾಯಿ
* 2-3 ಚಮಚ ಎಣ್ಣೆ/ತುಪ್ಪ
* ರುಚಿಗೆ ತಕ್ಕಷ್ಟು ಉಪ್ಪು
* 1/2 ಚಮಚ ಕರಿಮೆಣಸಿನ ಪುಡಿ
* 1/2 ಚಮಚ ಜೀರಿಗೆ
* 1 ಚಮಚ ಸೋಯಾ ಸಾಸ್
* ಕೊತ್ತುಂಬರಿ ಸೊಪ್ಪು
* 1/2 ಕಪ್ ತರಕಾರಿ (ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ)
ಇದನ್ನೂ ಓದಿ : ಬಿದನೂರು ಕೋಟೆ ಕೊಳದ ದಂಡೆ ಕುಸಿತ
ಮೊದಲು ಒಂದು ಕುಕ್ಕರಿನಲ್ಲಿ ಅಕ್ಕಿ ತೊಳೆದು ಅನ್ನ ಮಾಡಿಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಿ. ನಂತರ ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ. ತರಕಾರಿಗಳಾದ ಬೀನ್ಸ್ ಕ್ಯಾರೆಟ್, ಕ್ಯಾಪ್ಸಿಕಂ ಸಣ್ಣಗೆ ಕತ್ತರಿಸಿ ಸ್ವಲ್ಪ ಬೇಯಿಸಿಕೊಳ್ಳಿ. ನಂತರ ಒಂದು ಕಡಾಯಿಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಹಸಿಮೆಣಸು, ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾಕಿ ಚಿನ್ನದ ಬಣ್ಣಕ್ಕೆ ಬರುವವರೆಗೂ ಹುರಿಯಿರಿ. ಎಲ್ಲಾ ತರಕಾರಿಗಳನ್ನು ಒಗ್ಗರಣೆಗೆ ಹಾಕಿ ಬೇಯಿಸಿಕೊಳ್ಳಿ. ನಂತರ ಈ ಮಿಶ್ರಣಕ್ಕೆ ಅನ್ನ ಸೇರಿಸಿ, ಅದಕ್ಕೆ ಉಪ್ಪು, ಕರಿಮೆಣಸು ಪುಡಿ, ಸೋಯಾ ಸಾಸ್ ಎಲ್ಲವನ್ನೂ ಸೇರಿಸಿ 3-4 ನಿಮಿಷ ಬಾಡಿಸಿ ಕೊನೆಯಲ್ಲಿ ಕೊತ್ತುಂಬರಿ ಸೊಪ್ಪು ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿ ಸವಿಯಿರಿ. (ಏಜೆನ್ಸೀಸ್)