

Recipe: ಇಂದಿನ ದಿನಗಳಲ್ಲಿ ಎಲ್ಲರಿಗೂ ರುಚಿಕರ ಆಹಾರ ಎಂದರೆ ಇಷ್ಟ. ಹಾಗಾಗಿ ನಾವಿಂದು ಗಾರ್ಲಿಕ್ ಬಟರ್ ಜೋಳ ಮಾಡುವುದನ್ನು ತಿಳಿಸಿಕೊಡಲಿದ್ದೇವೆ. ಇದು ಒಂದು ಸರಳ ಮತ್ತು ರುಚಿಕರ ಸೈಡ್ ಡಿಶ್ ಅಗಿದೆ. ಇದು ಜೋಳದ ಹೊಸತಾಗಿ ಒಂದು ರೆಸಿಪಿ ರೀತಿಯಲ್ಲಿ ನಿಮಗೆ ನೀಡುತ್ತದೆ. ಇದನ್ನು ಸುಲಭ ರೀತಿಯಲ್ಲಿ ನಿಮ್ಮ ಮನೆಯಲ್ಲಿಯೇ ಮಾಡಿಕೊಳ್ಳಬಹುದು...
* 4 ಮೆಕ್ಕೆ ಜೋಳ
* 4 ಚಮಚ ಬೆಣ್ಣೆ
* 3 ಎಸಳು ಬೆಳ್ಳುಳ್ಳಿ
* 1/4 ಚಮಚ ಉಪ್ಪು
* 1 ಚಮಚ ಹಸಿ ಧನಿಯಾ ಪುಡಿ
* 1/2 ಚಮಚ ಮೆಣಸಿನ ಪುಡಿ
ಮೊದಲು ಜೋಳವನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಇದನ್ನು ಸ್ವಲ್ಪ ಸಮಯ ತಣ್ಣಗಾಗಲು ಬಿಡಿ. ಇದಾದ ಬಳಿಕ ಒಂದು ಚಿಕ್ಕ ಬಾಣಲಿಗೆ ಬೆಣ್ಣೆಯನ್ನು ಹಾಕಿ ಅದಕ್ಕೆ ಬೆಳ್ಳುಳ್ಳಿ, ಉಪ್ಪು, ಧನಿಯಾ ಪುಡಿ, ಮೆಣಸಿನ ಪುಡಿ ಸೇರಿಸಿ 2 ನಿಮಿಷ ಬೇಯಿಸಿ ಸಾಸ್ ಮಾಡಿಕೊಳ್ಳಿ. ನಂತರ ಬೇಯಿಸದ ಜೋಳಕ್ಕೆ ರೆಡಿ ಮಾಡಿಕೊಂಡ ಸಾಸ್ನ್ನು ಹಚ್ಚಿ ಒಲೆಯ ಮೇಲೆ ತವವನ್ನು ಇಟ್ಟು ಅದಕ್ಕೆ ಸಾಸ್ ಹಚ್ಚಿದ ಜೋಳವನ್ನು ಇಟ್ಟು 2 ನಿಮಿಷ ಹುರಿದು ನಂತರ ಸೇವಿಸಿರಿ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ