ಕೆಲವೇ ನಿಮಿಷಗಳಲ್ಲಿ ಮಾಡಿ ರುಚಿಕರವಾದ ನುಗ್ಗೆಕಾಯಿ ಸೂಪ್​! | Recipe

untitled-design-2025-08-23t175109105-68a9b24911e70
Published on

Recipe: ನುಗ್ಗೆಕಾಯಿ ಸೂಪ್ ಆರೋಗ್ಯಕ್ಕೆ ಅತ್ಯಂತ ಪೌಷ್ಟಿಕ ಮತ್ತು ಲಾಭದಾಯಕವಾದಂತಹ ಆಹಾರವಾಗಿದೆ. ನುಗ್ಗೆಕಾಯಿಯ ಎಲೆಗಳು, ಕಾಯಿಗಳು ಮತ್ತು ಬೀಜಗಳು ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ದೇಹದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ನುಗ್ಗೆಕಾಯಿಯಲ್ಲಿ ವಿಟಮಿನ್ A, C, E, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಜಿಂಕ್‌ನಂತಹ ಖನಿಜಗಳಿವೆ. ಇವು ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಲು, ಚರ್ಮದ ಆರೋಗ್ಯವನ್ನು ಸುಧಾರಿಸಲು ಮತ್ತು ದೃಷ್ಟಿಶಕ್ತಿಯನ್ನು ಬಲಪಡಿಸಲು ಸಹಾಯಕವಾಗಿವೆ. ನಾವಿಂದು ಆರೋಗ್ಯಕ್ಕೆ ಅಧಿಕವಾಗಿರುವ ನುಗ್ಗೆಕಾಯಿ ಸೂಪ್​ ಮಾಡುವುದನ್ನು ತಿಳಿಸಿಕೊಡಲಿದ್ದೇವೆ.

ಬೇಕಾಗುವ ಪದಾರ್ಥಗಳು

* 2-3 ನುಗ್ಗೆಕಾಯಿ (ಚಿಕ್ಕದಾಗಿ ಕತ್ತರಿಸಿದ)

* 1 ಈರುಳ್ಳಿ

* 1 ಟೊಮೆಟೊ

* 2-3 ಎಸಳು ಬೆಳ್ಳುಳ್ಳಿ

* ಸ್ವಲ್ಪ ಶುಂಠಿ

* 1 ಚಮಚ ಕಾಳುಮೆಣಸು

* 1/2 ಚಮಚ ಜೀರಿಗೆ

* ಉಪ್ಪು

* 1 ಚಮಚ ಎಣ್ಣೆ

* 3-4 ಕಪ್ ನೀರು

* ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ

ಮೊದಲು ನುಗ್ಗೆಕಾಯಿಯನ್ನು ತೊಳೆದು, 2-3 ಇಂಚಿನ ಉದ್ದದ ತುಂಡುಗಳಾಗಿ ಕತ್ತರಿಸಿ. ನಂತರ ಒಂದು ಕುಕ್ಕರ್​ನಲ್ಲಿ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಜೀರಿಗೆ, ಕೊಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ, ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ. ಇದಾದ ಬಳಿಕ, 3-4 ಕಪ್ ನೀರು, ಉಪ್ಪು, ಕಾಳುಮೆಣಸು ಮತ್ತು ಅರಿಶಿನ ಪುಡಿಯನ್ನು ಸೇರಿಸಿ ಕುಕ್ಕರ್‌ನಲ್ಲಿ 2-3 ಸೀಟಿಗಳವರೆಗೆ ಬೇಯಿಸಿಕೊಳ್ಳಿ. ಕುಕ್ಕರ್ ತಣ್ಣಗಾದ ನಂತರ, ಬೇಯಿಸಿದ ಮಿಶ್ರಣವನ್ನು ತಣ್ಣಗಾಗಲು ಬಿಡಿ.ನುಗ್ಗೆಕಾಯಿಯ ಒಳಭಾಗವನ್ನು ತೆಗೆದು ಮಿಶ್ರಣಕ್ಕೆ ಸೇರಿಸಿ. ನಂತರ, ಮಿಕ್ಸರ್‌ನಲ್ಲಿ ಮಿಶ್ರಣವನ್ನು ತೆಳುವಾಗಿ ರುಬ್ಬಿಕೊಂಡು ಸೋಸಿಕೊಳ್ಳಿ ನಂತರ ಮೇಲೆ ಕೊತ್ತುಂಬರಿ ಸೊಪ್ಪು ಹಾಕಿ 2 ನಿಮಿಷ ಕುದಿಸಿ ಸ್ವಲ್ಪ ತಣ್ಣಗಾದ ನಂತರ ಸೇವಿಸಿ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net